ನಮ್ಮ ದೇಹದ ತೂಕ ಇಳಿಸೋಕೆ ಸಾಕಷ್ಟು ಕಷ್ಟ ಪಡುತ್ತೀವಿ.. ಎಲ್ಲರೂ ಹೇಳಿದ ಡಯಟ್ ಮಾಡಿದರೂ ತೂಕ ಇಳಿಕೆಯಾಗಿಲ್ಲ ಅನ್ನುವವರು, ಈ ಸುಲಭ ಟಿಪ್ಸ್ ಫಾಲೋ ಮಾಡಿ. ನಿಮ್ಮ ಫೇವರೇಟ್ ಆಹಾರ ಸೇವಿಸಿಯೂ ಕೂಡ ತೂಕ ಇಳಿಸಬಹುದು.. ಹೇಗೆ ಅಂತೀರಾ? ಇಲ್ಲಿದೆ ನಿಮಗೆ ಸಿಂಪಲ್ ಸಲಹೆಗಳು..
ತಿಂಡಿ ಮಿಸ್ ಮಾಡಬೇಡಿ: ಬೆಳಗಿನ ತಿಂಡಿ ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ. ನೀವು ತಿಂಡಿ ಮಾಡದೇ ಇದ್ದರೆ ಗ್ಯಾಸ್ಟ್ರಿಕ್ ಆಗಿ ನೀವು ತೂಕ ಹೆಚ್ಚಿಸಿಕೊಳ್ಳುವ ಸಾಧ್ಯೆಗಳಿವೆ.
ನೀರು ಕುಡಿಯಿರಿ: ಪ್ರತಿದಿನ ಮುಂಜಾನೆ ಏಳುತ್ತಿದಂತೆ 1 ಗ್ಲಾಸ್ ನೀರಾದರೂ ಕುಡಿಯುವುದರಿಂದದೇಹದ ತೂಕ ಕಡಿಮೆ ಮಾಡಬಹುದು.
ಗ್ರೀನ್ ಟೀ ಕುಡಿರಿ: ನಿಮ್ಮ ಮೆಟಬಾಲಿಸಂ ಹೆಚ್ಚಿಸಿ ನಿಮ್ಮ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸುವಲ್ಲಿ ಗ್ರೀನ್ ಟೀ ಸಹಕಾರಿಯಾಗಲಿದೆ.
ಅಗಿದು ತಿನ್ನಿ: ನೀವು ನಿಧಾನವಾಗಿ ತಿನ್ನುವುದರಿಂದ ಹೆಚ್ಚು ಆಹಾರ ಸೇವಿಸುವುದನ್ನು ತಡೆಯಬಹುದು. ಇದು ದೇಹದ ತೂಕ ಇಳಿಸಲಿದೆ.
ಮಿತಿಯಾದ ಊಟ: ನಿಮ್ಮ ದಿನ ನಿತ್ಯದ ಆಹಾರದಲ್ಲಿ ಅಗತ್ಯ ತರಕಾರಿ, ಬೇಳೆಗಳನ್ನು ಹೊಂದಿರುವಂತೆ ನೋಡಿಕೊಳ್ಳಿ. ಇದು ನಿಮ್ಮ ತೂಕ ಇಳಿಸೋದು ಪಕ್ಕಾ.