ಹೊಸದಿಗಂತ ವರದಿ, ಮಂಗಳೂರು:
ತೆರಿಗೆ ವಂಚಿಸಿ ವಿಮಾನದ ಮೂಲಕ ಅಕ್ರಮವಾಗಿ ಲಕ್ಷಾಮನತರ ಮೊತ್ತದ ಚಿನ್ನ ಮತ್ತು ಕಾಸ್ಮೆಟಿಕ್ಸ್ ವಸ್ತುಗಳನ್ನು ಸಾಗಾಟವಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳಿಂದ ಬರೋಬ್ಬರಿ 5.84 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿ ಶಾರ್ಜಾದಿಂದ ಮಂಗಳೂರು ಏರ್ಪೋರ್ಟ್ಗೆ ಆಗಮಿಸಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇವರು ಅಕ್ರಮವಾಗಿ ಚಿನ್ನ ಹಾಗೂ ಕಾಸ್ಮೆಟಿಕ್ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. 5.84 ಲಕ್ಷ ರೂ. ಮೌಲ್ಯದ 120.38 ಗ್ರಾಂ ತೂಕದ 24 ಕ್ಯಾರೆಟ್ನ ಚಿನ್ನವನ್ನು ಕಾಲಿನಡಿಯಲ್ಲಿ ಇಟ್ಟು ಸಾಗಾಟ ಮಾಡಲಾಗುತ್ತಿತ್ತು. ಅಲ್ಲದೆ, ಬಂಧಿತ ಪ್ರಯಾಣಿಕರಿಂದ 1.71 ಲಕ್ಷ ವೌಲ್ಯದ ಕಾಸ್ಮೆಟಿಕ್ ವಸ್ತುಗಳನ್ನು ಕೂಡ ಕಸ್ಟಮ್ಸ್ ಅಧಿಕಾರಿಗಳು ಪಡಿಸಿಕೊಂಡಿದ್ದಾರೆ.