Thursday, August 11, 2022

Latest Posts

ತೆರೆಜಾಲುವಿನಲ್ಲಿ ವಿಚಿತ್ರ ಘಟನೆ: ಜಗಳ ಕೋಳಿದ್ದು, ಕೇಸು ಮಾನಭಂಗ ಯತ್ನದ್ದು!

ಹೊಸ ದಿಗಂತ ವರದಿ, ಕುಪ್ಪೆಪದವು:

ಎರಡು ಮನೆಯವರ ನಡುವೆ ಕೋಳಿ ವಿಚಾರವಾಗಿ ಪ್ರಾರಂಭ ವಾದ ತಕರಾರು ಪರಸ್ಪರ ಹಲ್ಲೆಗೆ ಕಾರಣವಾಗಿ ಕೊನೆಗೆ ಮಹಿಳೆಯು ಮಾನಭಂಗ ಯತ್ನ ಕೇಸು ದಾಖಲಿಸಿದ ವಿಚಿತ್ರ ಘಟನೆ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಠಾಣೆಯ ಕುಳವೂರಿನಲ್ಲಿ ನಡೆದಿದೆ.
ಪ್ರಕರಣದ ವಿವರ
ಕುಳವೂರು ಗ್ರಾಮದ ತೆರೆಜಾಲು ಎಂಬಲ್ಲಿಯ ನೆರೆಹೊರೆಯ ನಿವಾಸಿಗಳಾದ ವಿಠಲ ಪೂಜಾರಿ ಮತ್ತು ಶೇಖರ ಪೂಜಾರಿ ಎಂಬವರಿಗೆ ತಮ್ಮ ಜಾಗದ ಕುರಿತಂತೆ ತಕರಾರು ಇದ್ದು, ಆಗಾಗ ಈ ಬಗ್ಗೆ ಸಣ್ಣಪುಟ್ಟ ವಾಗ್ವಾದಗಳು ಸಾಮಾನ್ಯವಾಗಿದ್ದವು.
ಆದರೆ ಶುಕ್ರವಾರ ಶೇಖರ ಪೂಜಾರಿಯವರು ತನ್ನ ಕೋಳಿಯೊಂದನ್ನು ಮನೆಯ ಹತ್ತಿರದಲ್ಲಿ ಕಲ್ಲೊಂದಕ್ಕೆ ಕಟ್ಟಿ ಹಾಕಿದ್ದರು. ಇದನ್ನು ಗಮನಿಸಿದ ವಿಠಲ ಪೂಜಾರಿಯವರು ಕೋಳಿಯನ್ನು ಕಟ್ಟಿದ್ದ ಕಲ್ಲನ್ನು ಅಲ್ಲಿಂದ ಎತ್ತಿ ದೂರಕ್ಕೆ ಎಸೆದಿದ್ದರು. ಈ ವಿಚಾರವಾಗಿ ಶೇಖರ ಮತ್ತು ವಿಠಲ ಅವರುಗಳ ನಡುವೆ ಪ್ರಾರಂಭವಾದ ವಾಗ್ವಾದ ಪರಸ್ಪರ ಹೊಯ್ ಕೈ ಹಂತಕ್ಕೆ ತಲುಪಿ, ಶೇಖರ ಅವರನ್ನು ವಿಠಲ ಅವರು ನೆಲಕ್ಕೆ ಕೆಡವಿ ಒತ್ತಿ ಹಿಡಿದಾಗ ಶೇಖರ್ ಅವರ ಪತ್ನಿ ಶೋಭಾ ಅವರು ಇಬ್ಬರ ಜಗಳ ಬಿಡಿಸಲು ಮಧ್ಯೆ ಪ್ರವೇಶ ಮಾಡಿದ್ದು ಈ ವೇಳೆ ವಿಠಲ (60) ಅವರು ಶೋಭಾ ಅವರಿಗೂ ಹಲ್ಲೆ ನಡೆಸಿ, ಬಟ್ಟೆ ಹರಿದು ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಬಜಪೆ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ವಿಠಲ ಪೂಜಾರಿಯವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಶೋಭಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಠಲ ಪೂಜಾರಿಯವರು ತಲೆಮರೆಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss