ಹೊಸದಿಗಂತ ಆನ್ ಲೈನ್ ಡೆಸ್ಕ್:
ತೆಲಂಗಾಣ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿದೆ.
ಬಿಜೆಪಿ ಅಭ್ಯರ್ಥಿ ಎಂ.ರಘುನಂದನ್ ರಾವ್ ಅವರು ಒಂಬತ್ತು ಸುತ್ತಿನ ಮತ ಎಣಿಕೆ ನಂತರ 29,291 ಮತಗಳನ್ನು ಪಡೆದು ಮುನ್ನಡೆ ಸಾಧಿಸುತ್ತಿದ್ದಾರೆ. ಬಿಜೆಪಿಗೆ ಟೈಟ್ ಫೈಟ್ ನೀಡುತ್ತಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿ ಆರ್ ಎಸ್) 25,101 ಮತಗಳನ್ನು ಪಡೆದು ಚುನಾವಣಾ ಫಲಿತಾಂಶದ ಕಾವು ಹೆಚ್ಚು ಮಾಡುತ್ತಿದೆ. ಕಾಂಗ್ರೆಸ್ 5,800 ಮತಗಳನ್ನು ಪಡೆದಿದೆ.