ಹೈದರಾಬಾದ್: ತೆಲಂಗಾಣದಲ್ಲಿ ಮಳೆ ಸೃಷ್ಟಿಸಿರುವ ಅವಾಂತರಕ್ಕೆ ಈಗಾಗಲೇ 11 ಮಂದಿ ಮೃತಪಟ್ಟಿದ್ದಾರೆ.
ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, 9 ಮಂದಿ ಕಟ್ಟಡ ಕುಸಿದು ಮೃತಪಟ್ಟಿದ್ದಾರೆ. ಮೋಹಮ್ಮೀಡಿಯಾ ಹಿಲ್ಸ್ ಬಳಿಯ ಬಂದ್ಲಗುಂಡದಲ್ಲಿ ಮಳೆಗೆ ಬೌಂಡರಿ ವಾಲ್ಸ್ ಕುಸಿದು ಬಿದ್ದಿದೆ.
ಇಬ್ರಾಹಿಂಪಟ್ಟಣದಲ್ಲಿ ಮನೆಯ ಗೋಡೆ ಕುಸಿದು ಬಿದ್ದು ತಾಯಿ ಮಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಹನ್ನೆರಡು ಗಂಟೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಸಿಎಂ ಕೆ. ಚಂದ್ರಶೇಖರ ರಾವ್ ಎಲ್ಲರಿಗೂ ಅಲರ್ಟ್ ಆಗಿರಲು ಹೇಳಿದ್ದಾರೆ. ಮಳೆಯಿಂದಾಗಿ ಜನರ ಸ್ಥಿತಿ ಕಷ್ಟಾವಾಗಿದ್ದು, ಅಲರ್ಟ್ ಆಗಿದ್ದು, ಸುರಕ್ಷಿತ ತಾಣಗಳಿಗೆ ತೆರಳಲು ಹೇಳಿದ್ದಾರೆ.