Sunday, August 14, 2022

Latest Posts

ತೆಲಂಗಾಣದಲ್ಲಿ ಮಹಾಮಳೆ ಅಬ್ಬರ: ಪ್ರತಿ ಮನೆಗೆ 10,000 ರೂ ಪರಿಹಾರ ಘೋಷಿಸಿದ ಕೆಸಿಆರ್

ಹೈದರಾಬಾದ್: ತೆಲಂಗಾಣದಲ್ಲಿ 50 ಜನರನ್ನು ಬಲಿ ಪಡೆದ ಮಹಾಮಳೆ ಇದೀಗ ಮತ್ತೆ ಅಬ್ಬರಿಸಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು , ಹೈದರಾಬಾದ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆ ನಿರಾಶ್ರಿತ ಕುಟುಂಬಗಳಿಗೆ, ವಿಶೇಷವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಇತ್ತೀಚಿನ ಭಾರಿ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ಸಂಪೂರ್ಣವಾಗಿ ಮುಳುಗಿರುವ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ತಲಾ 10,000 ರೂ. ಹಣಕಾಸಿನ ನೆರವು ನೀಡುವ ನಿರ್ಧಾರವನ್ನು ತೆಲಂಗಾಣ ಸರ್ಕಾರ ಪ್ರಕಟಿಸಿದೆ.
ವನಸ್ಥಲಿಪುರಂ, ಎಲ್​.ಬಿ ನಗರ್​, ಉಪ್ಪಲ್​​, ಸಿಕಿಂದರಾಬಾದ್​, ಖೈರತಾಬಾದ್​, ಕುಕಟ್​ಪಲ್ಲಿ, ಹೈ-ಟೆಕ್​ ಸಿಟಿ, ಮೆಹದಿಪಟ್ಟಣಂ, ಆರಂ​ಘರ್​​, ಗೋಲ್ಕೊಂಡ, ನಾಗೋಲ್​​, ಸರೂರ್​ ನಗರ್​ ಸೇರಿದಂತೆ ಹೈದರಾಬಾದ್​ನ ಅನೇಕ ಪ್ರದೇಶಗಳು ಜಲಾವೃತವಾಗಿವೆ.
ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಸರ್ಕಾರವು ತಲಾ 1 ಲಕ್ಷ ಮತ್ತು ಭಾಗಶಃ ಹಾನಿಗೊಳಗಾದವರಿಗೆ ತಲಾ 50,000 ನೆರವು ನೀಡುತ್ತದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ತಕ್ಷಣದಿಂದ ಜಾರಿಗೆ ಬರುವಂತೆ 550 ಕೋಟಿ ಹಣವನ್ನು ಪುರಸಭೆ ಆಡಳಿತ ಇಲಾಖೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಆರ್ಥಿಕ ನೆರವು ವಿತರಣೆ ಮಂಗಳವಾರದಿಂದ ಪ್ರಾರಂಭವಾಗಲಿದೆ.
ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಸೌಲಭ್ಯಗಳ ರಿಪೇರಿ ಮತ್ತು ಜೀರ್ಣೋದ್ಧಾರವನ್ನು ಯುದ್ಧದ ಹೆಜ್ಜೆಯಲ್ಲಿ ಕೈಗೊಳ್ಳಲು ಮತ್ತು ಸಾಮಾನ್ಯ ಸ್ಥಿತಿಯು ಶೀಘ್ರವಾಗಿ ಮರಳುವಂತೆ ನೋಡಿಕೊಳ್ಳಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss