Sunday, August 14, 2022

Latest Posts

ತೆಲಂಗಾಣದಲ್ಲೂ ದೀಪಾವಳಿಗೆ ಪಟಾಕಿ ಮಾರಾಟ, ಬಳಕೆ ನಿಷೇಧ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಈ ಬಾರಿ ತೆಲಂಗಾಣ ಸರ್ಕಾರ ಹೈಕೋರ್ಟ್​ನ ಸೂಚನೆಯಂತೆ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ದೀಪಾವಳಿಗೆ ಪಟಾಕಿಗಳನ್ನು ಮಾರುವುದು ಹಾಗೂ ಬಳಸುವುದನ್ನು ನಿಷೇಧ ಮಾಡಿದೆ.
ಪಟಾಕಿ ಮಾರಾಟವನ್ನು ತಡೆಯಲು ಹಾಗೂ ಈ ಬಾರಿ ದೀಪಾವಳಿಯಲ್ಲಿ ಸಾರ್ವಜನಿಕರು ಅದನ್ನು ಬಳಸದಂತೆ ತಡೆಯಲು ಶೀಘ್ರವೇ ಕಟ್ಟನಿಟ್ಟಿನ ಆದೇಶ ಜಾರಿಗೊಳಿಸುವಂತೆ ತೆಲಂಗಾಣ ಸರ್ಕಾರಕ್ಕೆ ಸೂಚನೆ ನೀಡಿತ್ತು.
ತೆಲಂಗಾಣ ಹೈಕೋರ್ಟ್​ನ ಸೂಚನೆಯಂತೆ ಸರ್ಕಾರ ಪಟಾಕಿ ಬ್ಯಾನ್ ಆದೇಶವನ್ನು ಜಾರಿಗೊಳಿಸಿದ್ದರೂ, ಸುಪ್ರೀಂಕೋರ್ಟ್ ಕೆಲವೊಂದು ತಿದ್ದುಪಡಿಗಳನ್ನು ಮಾಡಿ, ನಿಗದಿತ ಸಮಯದಲ್ಲಿ ಪಟಾಕಿ ಸಿಡಿಸಲು ಅನುವು ಮಾಡಿಕೊಟ್ಟಿದೆ. ಹಸಿರು ನ್ಯಾಯಾಧೀಕರಣದ ಮಾರ್ಗಸೂಚಿಗಳ ಅನ್ವಯ ಸುಪ್ರೀಂಕೋರ್ಟ್ ಕೆಲವೊಂದು ತಿದ್ದುಪಡಿಗಳನ್ನು ಮಾಡಿದೆ.

ತಿದ್ದುಪಡಿಗಳೆಂದರೆ…
ಪ್ರದೇಶದ ಗಾಳಿಯ ಗುಣಮಟ್ಟ ಆಧರಿಸಿ ಪಟಾಕಿ ಖರೀದಿಯ ಮೇಲೆ ನಿರ್ಬಂಧ

ಪಟಾಕಿ ಸಿಡಿಸಲು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ

ಅತಿ ಹೆಚ್ಚು ವಾಯು ಮಾಲಿನ್ಯದ ಪ್ರದೇಶಗಳಲ್ಲಿ ಪಟಾಕಿಗೆ ನಿಷೇಧ

ದೀಪಾವಳಿ ಮಾತ್ರವಲ್ಲದೆ ಕ್ರಿಸ್​ಮಸ್​​, ಹೊಸ ವರ್ಷದಂದೂ ಇದು ಅನ್ವಯ

ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯದ ಡಿಜಿಪಿ, ಆಗ್ನಿಶಾಮಕ ದಳದ ಡಿಜಿ, ಎಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಪಟಾಕಿ ಮಳಿಗೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss