Tuesday, July 5, 2022

Latest Posts

ತೆಲುಗಿನ ಜನಪ್ರಿಯ ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆ: ಗೆಳೆಯನಿಂದ ಕಿರುಕುಳ?

ಹೈದರಾಬಾದ್: ತೆಲುಗು ಜನಪ್ರಿಯ ಜನಪ್ರಿಯ ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಧುರಾ ನಗರದಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗುದುಕೊಂಡಿದ್ದಾರೆ.
ಆಂದ್ರಪ್ರದೇಶ ಮೂಲದ ಶ್ರಾವಣಿ ಮನಸು ಮಮತ ಹಾಗೂ ಮೌನರಾಗಂ ಧಾರವಾಹಿಯಲ್ಲಿ ನಟಿಸಿದ್ದರು. ಕೆಲದಿನಗಳ ಹಿಂದೆ ಟಿಕ್‌ಟಾಕ್ ಮೂಲಕ ಪರಿಚಯವಾದ ದೇವರಾಜ್ ಎನ್ನುವ ವ್ಯಕ್ತಿ ಈಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪ್ರೀತಿ ನಾಟಕವಾಡಿ ಕೆಲ ಫೋಟೊ, ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಹೇಳಿ ದುಡ್ಡು ಕಸಿದುಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಶ್ರಾವಣಿ ದೂರು ನೀಡಿದ್ದಳು ಎಂದು ಕುಟುಂಬಸ್ಥರು ಹೇಳಿದ್ದಾರೆ. ಈಗಾಗಲೇ ಇವನ ಹಿಂಸೆ ತಾಳಲಾರದೆ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಶ್ರಾವಣಿ, ಈ ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರಾಜು ರೆಡ್ಡಿ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss