Wednesday, July 6, 2022

Latest Posts

ತೆಲುಗಿನ ಲವ್ ಮಾಕ್ಟೆಲ್ ಸಿನಿಮಾದಲ್ಲಿ ತಮನ್ನಾ ನಾಯಕಿ , ಅವರು ಯಾವ ಪಾತ್ರ ಮಾಡಲಿದ್ದಾರೆ ಗೊತ್ತಾ?

ಬಹು ಭಾಷಾ ನಟಿ ತಮನ್ನಾ ಭಾಟಿಯಾ  ಕನ್ನಡದಲ್ಲಿ  ಪೂರ್ಣ ಪ್ರಮಾಣದ  ಸಿನಿಮಾ ಮಾಡಿದಿದ್ದರೂ, ಎರಡು  ಐಟಂ ಸಾಂಗ್‌ಗಳಲ್ಲಿ  ಕಾಣಿಸಿಕೊಂಡು  ಮಿಂಚಿದ್ದಾರೆ.ನಿಖಿಲ್  ಕುಮಾರಸ್ವಾಮಿ  ಅಭಿನಯದ  ಜಾಗ್ವರ್  ಚಿತ್ರದ  ಒಂದು  ಹಾಡಿಗೆ ತಮನ್ನಾ  ಹೆಜ್ಜೆ  ಹಾಕಿದ್ದಾರೆ. ರಾಕಿ ಭಾಯ್’ ಯಶ್ ಜೊತೆ ’ಕೆಜಿಎಫ್  ಚಿತ್ರದಲ್ಲೂ ’ಜೋಕೇ… ನಾನು ಬಳ್ಳಿಯ ಮಿಂಚು…’ ಅಂತ ತಮನ್ನಾ ಹಾಡಿ ಕುಣಿದಿದ್ದರು. ಹೀಗಿದ್ದರೂ, ಅವರು ಪೂರ್ಣ ಪ್ರಮಾಣದಲ್ಲಿ ಕನ್ನಡದ ಸಿನಿಮಾವೊಂದಕ್ಕೆ ನಾಯಕಿಯಾಗಿ ನಟಿಸಿಲ್ಲ ಅನ್ನೋ ಬೇಸರ ಅವರ ಕನ್ನಡದ ಅಭಿಮಾನಿಗಳಿಗಂತೂ ಇದ್ದೇ ಇದೆ. ಅಂದಹಾಗೆ, ತಮನ್ನಾ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ ೧೫ ವರ್ಷಗಳಾಯ್ತು. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ. ಹಿಂದಿ, ತಮಿಳು, ತೆಲುಗು ‘ಭಾಷೆಯ ಚಿತ್ರರಂಗದಲ್ಲಿ ಅವರು ಸಮಾನ ಅವಕಾಶಗಳಿವೆ. ಸದ್ಯ ಅವರು ಕನ್ನಡದ ’ಲವ್ ಮಾಕ್ಟೇಲ್’ ಸಿನಿಮಾದ ರಿಮೇಕ್ನಲ್ಲಿ ನಾಯಕಿಯಾಗಿ ತಮನ್ನಾ ನಟಿಸಲಿದ್ದಾರೆ. ಈ ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮೂಲಗಳ ಪ್ರಕಾರ, ’ಲವ್ ಮಾಕ್ಟೇಲ್’ ಸಿನಿಮಾದ ತೆಲುಗು ರಿಮೇಕ್ನಲ್ಲಿ ನಾಯಕಿಯಾಗಿ ತಮನ್ನಾ ಕಾಣಿಸಿಕೊಳ್ಳಲಿದ್ದಾರಂತೆ. ಇಂಥದ್ದೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಭರ್ಜರಿ ಆಗಿ ಸದ್ದು ಮಾಡುತ್ತಿದೆ. ಲವ್ ಮಾಕ್ಟೇಲ್ನಲ್ಲಿ ನಟಿ ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರ ಮಾಡಿದ್ದರು. ಮಿಲನಾಗೆ ಬಹಳ ಮುಖ್ಯವಾದ ಹಾಗೂ ಎಮೋಷನಲ್ ಆದ ಪಾತ್ರವಿತ್ತು. ಬಹುಶಃ ಕನ್ನಡದಲ್ಲಿ ಮಿಲನಾ ನಿಭಾಯಿಸಿದ್ದ ’ನಿಧಿಮಾ’ ಪಾತ್ರವನ್ನೇ ತೆಲುಗಿನಲ್ಲಿ ತಮನ್ನಾ ನಿಭಾಯಿಸಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss