ಹೊಸ ದಿಗಂತ ಆನ್ ಲೈನ್ ಡೆಸ್ಕ್:
ತೈಲ ಟ್ಯಾಂಕರ್ಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ದಾರುಣವಾಗಿ ಮೃತಪಟ್ಟಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಬುಂಡೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಲೋನಿಯಾ ಎಂಬ ಟೋಲ್ ಪ್ಲಾಜಾದ ನಡೆದಿದೆ.
ಮೃತಪಟ್ಟವರನ್ನು ವಿಜಯ್ ಬಹದ್ದೂರ್ ಪಟೇಲ್, ಅವರ ಪತ್ನಿ ಸರಿತಾ, ಮಗ ಅಜಯ್ ಕುಮಾರ್ ಮತ್ತು ರಾಧಾ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಮಹಿಳೆ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ ಮೃತ ವಿಜಯ್ ಬಹದ್ದೂರ್ ಅವರ ಪುತ್ರಿ ಚಂದನಾ (20) ಸೇರಿದಂತೆ ಶ್ರೇಯಾ (9) ಮತ್ತು ಪ್ರಖರ್ (4) ಎಂಬ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗದಲ್ಲಿ ಚಲಿಸುತ್ತಿದ್ದ ಕಾರು ತೈಲ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಧಗ-ಧಗ ಉರಿದಿದೆ. ಕಾರಿನಲ್ಲಿದ ಒಂದೇ ಕುಟುಂಬದ ಐದು ಮಂದಿ ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅತಿಯಾದ ವೇಗದಿಂದ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.