spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 26, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತ್ರಿಪುರಾಂತ ಆಟೋ ಪಾರ್ಕ್: ಭೂ ಪರಿಹಾರಕ್ಕೆ ಕ್ರಮ

- Advertisement -Nitte

ಹೊಸ ದಿಗಂತ ವರದಿ ಬೀದರ್:

ಬಸವಕಲ್ಯಾಣ ತಾಲ್ಲೂಕಿನ ತ್ರಿಪುರಾಂತದಲ್ಲಿ ಆಟೊ ಪಾರ್ಕ್ ಸ್ಥಾಪನೆಗೆ ಪಡೆದ ಭೂಮಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಆಟೊ ಪಾರ್ಕ್‍ಗೆ 54-21 ಎಕರೆ ಜಮೀನಿಗೆ 2017 ರ ಮಾರ್ಚ್ 31 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಭೂ ಪರಿಹಾರ ನಿಗದಿ ಬಾಕಿ ಇದೆ. 2018 ರ ಅಕ್ಟೋಬರ್ 31 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ದರದ ಬಗ್ಗೆ ಭೂ ಮಾಲೀಕರು ಒಮ್ಮತಕ್ಕೆ ಬಾರದ ಕಾರಣ ಭೂ ಪರಿಹಾರ ನಿಗದಿಪಡಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರೊಂದಿಗೆ ಸಮಾಲೋಚಿಸಿ ಆ ಪ್ರದೇಶದಲ್ಲಿನ ಮಾರ್ಗಸೂಚಿ ದರ ಮತ್ತು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಹಿಂದಿನ ಮೂರು ವರ್ಷಗಳ ಮಾರಾಟದ ಅಂಕಿ-ಅಂಶಗಳನ್ನು ಪರಿಗಣಿಸಿ ಶಿಫಾರಸು ಮಾಡುವ ದರಕ್ಕೆ ಕೆ.ಐ.ಎ.ಡಿ. ಮಂಡಳಿ ಸಭೆಯ ಅನುಮೋದನೆ ಪಡೆದು ನಿಯಮಾನುಸಾರ ಪರಿಹಾರ ಪಾವತಿಸಲಾಗುವುದು ಹೇಳಿದ್ದಾರೆ.
ಗಮನಕ್ಕೆ ಬಂದಿದೆ: ಬೀದರ್ ಗಡಿಯಿಂದ 25 ಕಿ.ಮೀ. ದೂರದಲ್ಲಿ ಇರುವ ಜಹೀರಾಬಾದ್ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಮತ್ತೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಜಹೀರಾಬಾದ್ ಪ್ರದೇಶದ ಪೂರ್ವಕ್ಕೆ ಇಳಿಜಾರು ಇದೆ. ಬೀದರ್‍ಗಿಂತ ಕೆಳಮಟ್ಟದಲ್ಲಿ ಇದೆ. ಹೀಗಾಗಿ ಅಲ್ಲಿನ ಕೈಗಾರಿಕೆಗಳ ತಾಜ್ಯ ಬೀದರ್ ಜಿಲ್ಲೆಗೆ ಹರಿದು ಬರುವುದಿಲ್ಲ ಎಂದು ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss