Thursday, August 11, 2022

Latest Posts

ತ್ರಿಬಲ್ ರೈಡ್ ಗೆ ಹೊರಟ ಜೊತೆ-ಜೊತೆಯಲಿ ಮೇಘಾ ಶೆಟ್ಟಿ, ಅದು ಯಾವುದು ಗೊತ್ತಾ?

ಜೊತೆ-ಜೊತೆಯಲಿ ಧಾರಾವಾಹಿನಟಿ  ಅನು  ಪಾತ್ರಧಾರಿ  ಮೇಘಾ  ಶೆಟ್ಟಿಗೆ  ಹೆಚ್ಚು  ಜನಪ್ರಿಯ  ಪಡೆದಿದ್ದರು.  ಆದರೆ  ಅವರಿಗೆ  ಈಗ  ಅದೃಷ್ಟ   ಒಲಿದು ಬಂದಿದೆ.ನಟಿಯಾಗಿ ಗುರುತಿಸಿಕೊಂಡ ಕಡಿಮೆ ಅವಧಿಯಲ್ಲಿಯೇ ಅವರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬಡ್ತಿ ದೊರೆತಿದೆ. ಸ್ಟಾರ್ ನಟನ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಮೇಘ ಶೆಟ್ಟಿ.

ಗೋಲ್ಡನ್ ಸ್ಟಾರ್ ನಾಯಕನಾಗಿ ನಟಿಸುತ್ತಿರುವ ಮುಂದಿನ ಸಿನಿಮಾ ’ತ್ರಿಬಲ್ ರೈಡ್’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಮೇಘ ಶೆಟ್ಟಿ ನಟಿಸುತ್ತಿದ್ದಾರೆ. ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಜೊತೆ-ಜೊತೆಯಲಿ’ ಧಾರಾವಾಹಿಯು ಮೇಘಾ ಶೆಟ್ಟಿ ಅವರ ಮೊದಲ ಧಾರಾವಾಹಿ ಆಗಿದೆ. ಮೊದಲ ಧಾರಾವಾಹಿಯೇ ಮೇಘಾ ಶೆಟ್ಟಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು, ಹಿರಿತೆರೆಗೆ ಲಗ್ಗೆ ಇಡಲಿದ್ದಾರೆ.

ತ್ರಿಬಲ್ ರೈಡ್ ಸಿನಿಮಾವನ್ನು ರಗಡ್ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಗೌಡ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಕೆಲಸ ಪ್ರಾರಂ‘ವಾಗಿದ್ದು, ಹೈದರಾಬಾದ್ನಲ್ಲಿ ಹಾಡುಗಳ ರೆಕಾರ್ಡಿಂಗ್ ಮಾಡಲಾಗುತ್ತಿದೆ.

ಲವ್, ಕಾಡಿಮಿ, ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಕಥೆ ತ್ರಿಬಲ್ ರೈಡ್ ಸಿನಿಮಾದ್ದಾಗಿದೆ. ಈ ಸಿನಿಮಾವನ್ನು ರಾಮ್ ಗೋಪಾಲ್ ನಿರ್ಮಿಸುತ್ತಿದ್ದಾರೆ. ಸಿನಿಮಾಕ್ಕೆ ಕಾರ್ತಿಕ್ ಸಂಗೀತ ನೀಡಲಿದ್ದಾರೆ. ಸಿನಿಮಾದಲ್ಲಿ ರವಿಶಂಕರ್, ಚಿಕ್ಕಣ್ಣ ಸೇರಿ ಇನ್ನೂ ಹಲವು ನಟರಿದ್ದಾರೆ.

 

ಮೇಘ ಶೆಟ್ಟಿ ಸಿನಿಮಾಕ್ಕೆ ಹೋದರೆ ಧಾರಾವಾಹಿ ಕತೆ ಏನು? ಎಂಬ ಅನುಮಾನ ಪ್ರಾರಂಭವಾಗಿದೆ. ಆದರೆ ಧಾರಾವಾಹಿ ಚಿತ್ರೀಕರಣಕ್ಕೆ ‘ಕ್ಕೆ ಆಗದ ರೀತಿಯಲ್ಲಿ ಮೇಘ ಶೆಟ್ಟಿ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. ಅಥವಾ ಕತೆಯಲ್ಲಿ ಕೆಲ ದಿನಗಳ ಕಾಲ ಬದಲಾವಣೆ ತರುವ ಸಾಧ್ಯತೆಯೂ ಇದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss