ಬಳ್ಳಾರಿ: ತ್ರಿವಳಿ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರ
ಮೊಗದಲ್ಲಿ ಸಂಭ್ರಮ ಮನೆ ಮಾಡಿದೆ. ಗುರುವಾರ ತುಂಗಾ (ಗಾಜನೂರು) ಜಲಾಶಯದಿಂದ 56 ಸಾವಿರ ಕ್ಯೂಸೆಕ್ಸ್ ನೀರು ನದಿಗೆ
ಹರಿ ಬಿಟ್ಟದ್ದು, ಒಲ ಹರಿವು ಹೆಚ್ಚಾಗಿದೆ. ಗುರುವಾರ 17 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವಿದ್ದು, ಶುಕ್ರವಾರ 50 ಸಾವಿರ ದಾಟಲಿದೆ
ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಹಡಗಲಿ ವ್ಯಾಪ್ತಿಯ ನದಿ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ಪಾತ್ರದ ಕಡೆ
ತೆರಳಕೂಡದು ಎಂದು ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.