ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತ್ರಿವಳಿ ತಲಾಖ್ ನಿಷೇಧಕ್ಕೆ 1 ವರ್ಷ| ತ್ರಿವಳಿ ತಲಾಖ್ ಪ್ರಕರಣಗಳು ಶೇ. 82ರಷ್ಟು ಇಳಿಕೆ

ಹೊಸದಿಲ್ಲಿ: ಸಂಸತ್ತಿನಲ್ಲಿ ಟ್ರಿಪಲ್ ತಲಾಖ್ ಮಸೂದೆಯ ಅಂಗೀಕಾರದ ಮೊದಲ ವಾರ್ಷಿಕೋತ್ಸವವಾಗಿದೆ. ಇದು ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿದಂತಾಗಿದ್ದು, ಇದರಿಂದ ಸಮಾಜದಲ್ಲಿ ಮಹಿಳೆಯರಿಗೆ ಅರ್ಹ ಗೌರವ ಸಿಗುತ್ತಿದೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್  ಹೇಳಿದರು.

ಒಂದು ವರ್ಷದ ಹಿಂದೆ 2019 ರ ಜುಲೈ 30 ರಂದು ನರೇಂದ್ರ ಮೋದಿ ಸರ್ಕಾರ ಟ್ರಿಪಲ್ ತಲಾಖ್ ಅನ್ನು ರದ್ದುಗೊಳಿಸಿತು. ಇದು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ ಮತ್ತು ನಮ್ಮ ಸಮಾಜದಲ್ಲಿ ಅವರು ಅರ್ಹವಾದ ಗೌರವ ಘನತೆನ್ನು ನೀಡಿದೆ. ಈಗ, ಟ್ರಿಪಲ್ ತಲಾಕ್ ಪ್ರಕರಣಗಳು ಕಾನೂನು ಜಾರಿಗೆ ಬಂದಾಗಿನಿಂದ ಶೇ.82 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಂ ಮಹಿಳೆಯರು ಧನ್ಯವಾದ ಹೇಳುವ ವಿಡಿಯೋ ಹಂಚಿಕೊಂಡಿದ್ದು, ಮುಸ್ಲಿಂ ಹೆಣ್ಣು ಮಕ್ಕಳ ಹಕ್ಕು ದಿನ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಟ್ವೀಟ್ ಮಾಡಿದ್ದಾರೆ.

ಮುಸ್ಲಿಂ ಮಹಿಳೆಯರು (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ ಮುಸ್ಲಿಂ ಪುರುಷರು ತ್ವರಿತ ವಿಚ್ಛೇಧನವನ್ನು ನಿಷೇಧಿಸಲಾಗಿದ್ದು, ಕಾನೂನಿನ ಯಾವುದೇ ಉಲ್ಲಂಘನೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss