Friday, July 1, 2022

Latest Posts

ತ್ರಿವಳಿ ತಲಾಖ್ ವಿರುದ್ಧ ಹೋರಾಟ ಮಾಡಿದ್ದ ಶಯರಾ ಬನೋ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಡೆಹಾರಡೂನ್: ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ತ್ರಿವಳಿ ತಲಾಖ್​ ಪದ್ಧತಿಯ ವಿರುದ್ಧ 2017ರಲ್ಲಿ ಧ್ವನಿ ಎತ್ತಿದ್ದ ಶಯರಾ ಬನೋ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಶನಿವಾರ ಉತ್ತರಖಾಂಡ್ ರಾಜ್ಯದ ಡೆಹರಾಡೂನ್ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಶಯರಾ ಬನೋ ಕಮಲದ ಬಾವುಟ ಹಿಡಿದರು. ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬಸೀಂಧರ್ ಭಗತ್ ಮತ್ತು ಸಂಘಟನಾ ಕಾರ್ಯದರ್ಶಿ ಅಜಯ್ ಕುಮಾರ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು.

2016ರಲ್ಲಿ ಶಯರಾ ತ್ರಿವಳಿ ತಲಾಖ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.ಇವರ ಜತೆ ಜತೆಗೆ ಆಫ್ರಿನ್​ ರೆಹಮಾನ್‌, ಗುಲ್ಶನ್‌ ಪರ್ವೀನ್‌, ಇಶ್ರತ್‌ ಜಹಾನ್‌ ಮತ್ತು ಆತಿಯಾ ಸಾಬ್ರಿ ಎಂಬ ಇತರ ನಾಳ್ವರು ಮಹಿಳೆಯರ ಅರ್ಜಿಗಳನ್ನೂ ಒಟ್ಟು ಸೇರಿಸಿ ವಿಚಾರಣೆ ನಡೆಸಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಗೆ ರದ್ದು ಮಾಡಿತು.

ಪಕ್ಷ ನೀಡಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡುತ್ತೇನೆ.  ಬಿಜೆಪಿ ಸೇರುವ ಮೂಲಕ ತಾವು ಮುಸ್ಲಿಂ ಮಹಿಳೆಯರಿಗೆ ಪಕ್ಷದ ಸಿದ್ಧಾಂತಗಳ ಮನವರಿಕೆ ಮಾಡುವುದಾಗಿ ಶಯರಾ ಬನೋ ಹೇಳಿದ್ದಾರೆ.  ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಶಯರಾ ಅವರಿಗೆ ಪಕ್ಷ ಸದ್ಯ ಯಾವುದೇ ಜವಾಬ್ದಾರಿಗಳನ್ನು ನೀಡಿಲ್ಲ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss