Sunday, June 26, 2022

Latest Posts

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ನಲ್ಲಿ ಮುಗ್ಗರಿಸಿದ ಪಿವಿ ಸಿಂಧು, ಸಮೀರ್ ವರ್ಮ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್​​ ಫೈನಲ್​​ ಹಣಾಹಣಿಯಲ್ಲಿ ಭಾರತದ ಷಟ್ಲರ್​​ ಪಿ.ವಿ.ಸಿಂಧು ಹಾಗು ಸಮೀರ್ ವರ್ಮ ಸಿಂಗಲ್ಸ್ ವಿಭಾಗದಲ್ಲಿ ಸೋಲನುಭವಿಸಿದರು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಗುರುವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ವಿಶ್ವದ 92ನೇ ರ್‍ಯಾಂಕಿಂಗ್‌ ಆಟಗಾರ್ತಿ ಮಲೇಷಿಯಾದ ಕಿಸೋನಾ ಸೆಲ್ವದುರೇ ಅವರನ್ನು ಕೇವಲ 35 ನಿಮಿಷಗಳ ಆಟದಲ್ಲಿ 21-10, 21-12 ಅಂತರದಿಂದ ಮಣಿಸಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದ್ದರು.
ಗುರುವಾರ ಭಾರತದ ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್​​ ಸೈರಾಜ್ ರಾಂಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಮಲೇಷಿಯಾದ ಗೋಹ್ ಲಿಯು ಯಿಂಗ್ ಮತ್ತು ಚಾನ್ ಪೆಂಗ್ ಸೂನ್ ವಿರುದ್ಧ ರೋಚಕ ಗೆಲುವಿನ ನಂತರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಖಚಿತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss