Wednesday, August 10, 2022

Latest Posts

ದಕ್ಷಿಣ ಕನ್ನಡದಲ್ಲಿ ಭಾನುವಾರ ಐವರಿಗೆ ಕೊರೋನಾ ದೃಢ: ಓರ್ವ ಮೃತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಐವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಐವರ ಪೈಕಿ ಮಹಾರಾಷ್ಟ್ರದಿಂದ ಆಗಮಿಸಿದ 24 ವರ್ಷದ ಯುವಕ ಮೃತಪಟ್ಟಿದ್ದಾರೆ. ರೋಗಿ ಸಂಖ್ಯೆ 4526ರ ಸಂಪರ್ಕದಿಂದ 12ವರ್ಷದ ಬಾಲಕನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಉಳಿದ ಮೂವರು ಸೋಂಕಿತರು ಸೌದಿ ಅರೇಬಿಯಾದಿಂದ ಆಗಮಿಸಿದವರು. ಸೌದಿಯಿಂದ ಆಗಮಿಸಿದ 24 ಮತ್ತು 26 ವರ್ಷದ ಯುವತಿಯರು, 60ವರ್ಷದ ವೃದ್ಧನಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 276ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಪ್ರಸ್ತುತ ವಿದೇಶದಿಂದ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಭಾನುವಾರ ಸೋಂಕಿತರೊಬ್ಬರ ಸಂಪರ್ಕದಿಂದ ಕೊರೋನಾ ಹರಡಿರುವ ಪ್ರಕರಣವೂ ವರದಿಯಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನತೆಯ ಆತಂಕವನ್ನು ಜೀವಂತದಲ್ಲಿ ಇಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss