Sunday, August 14, 2022

Latest Posts

ದಕ್ಷಿಣ ಕನ್ನಡದಲ್ಲಿ ಭಾನುವಾರ 193 ಮಂದಿಗೆ ಕೊರೋನಾ ಸೋಂಕು ದೃಢ, 164 ಮಂದಿ ಗುಣಮುಖ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಭಾನುವಾರ 164 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಇದರಲ್ಲಿ ಗೃಹ ಕೇರ್ ಸೆಂಟರ್‌ನ 97 ಮತ್ತು ಆಸ್ಪತ್ರೆಗಳಿಂದ ಬಿಡುಗಡೆಯಾದ 67 ಮಂದಿ ಸೇರಿದ್ದಾರೆ. ಈ ತನಕ ಒಟ್ಟು 7,677 ಮಂದಿ ಗುಣಮುಖರಾಗಿದ್ದಾರೆ.
193 ಮಂದಿಗೆ ಕೋವೀಡ್ ಸೋಂಕು ತಗಲಿರುವುದು ದೃಢ ಪಟ್ಟಿದೆ. ಮಂಗಳೂರಿನ 130, ಬಂಟ್ವಾಳದ 21, ಪುತ್ತೂರಿನ 06೬, ಸುಳ್ಯದ 19, ಬೆಳ್ತಂಗಡಿಯ 08 ಮತ್ತು ಹೊರ ಜಿಲ್ಲೆಗಳ 09 ಮಂದಿಗೆ ಸೋಂಕು ದೃಢ ಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ 10.330ಕ್ಕೆ ಹೆಚ್ಚಿದೆ.
ಪ್ರಾಥಮಿಕ ಸಂಪರ್ಕದಿಂದ ೪೫ಮಂದಿಯಲ್ಲಿ, ಶೀತಜ್ವರದಿಂದ ಬಳಲುತ್ತಿದ್ದ 105 ಮಂದಿಯಲ್ಲಿ ಹಾಗೂ ತೀವ್ರ ಉಸಿರಾಟದ ತೊಂದರೆಗೆ ಒಳಪಟ್ಟ 08 ಮಂದಿಯಲ್ಲಿ ಸೋಂಕು ಖಚಿತಗೊಂಡಿದೆ. 34 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಒಬ್ಬರು ಪ್ರಯಾಣದ ಹಿನ್ನೆಲೆ ಹೊಂದಿರುವರು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ ೫ ಸಾವು ಸಂಭವಿಸಿದೆ. ಇದರಲ್ಲಿ ಮಂಗಳೂರಿನ ಮೂವರು, ಬಂಟ್ವಾಳದ ಇಬ್ಬರು ಸೇರಿದ್ದಾರೆ. ಈ ತನಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 310 ಮಂದಿ ಮೃತ ಪಟ್ಟಿರುವರು ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss