ಮಂಗಳೂರು: ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ 14 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. 11 ವರ್ಷದ ಬಾಲಕಿ ಸೇರಿದಂತೆ 14 ಮಂದಿಯಲ್ಲಿ ಕೊರೋನಾ ಸೊಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 119ಕ್ಕೆ ಏರಿಕೆಯಾದಂತಾಗಿದೆ.
ಶನಿವಾರ ಸೋಂಕು ಪತ್ತೆಯಾದ ಎಲ್ಲರನ್ನು ಕೂಡ ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್ಗೆ ದಾಖಲಿಸಲಾಗಿದೆ. ಸೋಂಕಿತರ ಪೈಕಿ 13 ಮಂದಿ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ನಲ್ಲಿ ಇದ್ದವರಾಗಿದ್ದಾರೆ. ಇನ್ನೊಬ್ಬರಿಗೆ ರೋಗಿ ಸಂಖ್ಯೆ 947 ಇವರಿಂದ ಸೋಂಕು ತಗುಲಿರುವುದು ದೃಡಪಟ್ಟಿದೆ.