Thursday, August 11, 2022

Latest Posts

ದಕ್ಷಿಣ ಕನ್ನಡದಲ್ಲಿ 218 ಮಂದಿ ಗುಣಮುಖ, 247 ಮಂದಿಗೆ ಸೋಂಕು ದೃಢ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಂಗಳವಾರ 218 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಇದರಲ್ಲಿ ಕೋವಿಡ್ ಕೇರ್ ಸೆಂಟರ್‌ನ 2 ಮಂದಿ, ಗೃಹ ಕೇರ್ ಸೆಂಟರ್‌ನ 180  ಮತ್ತು ಆಸ್ಪತ್ರೆಗಳಿಂದ ಬಿಡುಗಡೆಯಾದ 36 ಮಂದಿ ಸೇರಿದ್ದಾರೆ. ಈ ತನಕ ಒಟ್ಟು 8,136 ಮಂದಿ ಗುಣಮುಖರಾಗಿದ್ದಾರೆ.
247 ಮಂದಿಗೆ ಕೋವೀಡ್ ಸೋಂಕು ತಗಲಿರುವುದು ದೃಢ ಪಟ್ಟಿದೆ. ಮಂಗಳೂರಿನ 171, ಬಂಟ್ವಾಳದ 48, ಪುತ್ತೂರಿನ 6, ಸುಳ್ಯದ 4, ಬೆಳ್ತಂಗಡಿಯ 10 ಮತ್ತು ಹೊರ ಜಿಲ್ಲೆಗಳ 8 ಮಂದಿಗೆ ಸೋಂಕು ದೃಢ ಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ 10.778ಕ್ಕೆ ಹೆಚ್ಚಿದೆ.
ಪ್ರಾಥಮಿಕ ಸಂಪರ್ಕದಿಂದ 85 ಮಂದಿಯಲ್ಲಿ, ಶೀತಜ್ವರದಿಂದ ಬಳಲುತ್ತಿದ್ದ 72  ಮಂದಿಯಲ್ಲಿ ಹಾಗೂ ತೀವ್ರ ಉಸಿರಾಟದ ತೊಂದರೆಗೆ ಒಳಪಟ್ಟ11 ಮಂದಿಯಲ್ಲಿ ಸೋಂಕು ಖಚಿತಗೊಂಡಿದೆ. 78 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಒಬ್ಬರು ಪ್ರಯಾಣದ ಹಿನ್ನೆಲೆ ಹೊಂದಿರುವರು ಎಂದು ಜಿಲ್ಲಾಡಳಿತ ತಿಳಿಸಿದೆ.
ಮಂಗಳವಾರ 3 ಸಾವು ಸಂಭವಿಸಿದೆ. ಇದರಲ್ಲಿ ಮಂಗಳೂರಿನ ಒಬ್ಬರು, ಬಂಟ್ವಾಳದ ಒಬ್ಬರು ಸೇರಿದ್ದಾರೆ. ಒಬ್ಬರು ಹೊರ ಜಿಲ್ಲೆಯವರು. ಈ ತನಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 319 ಮಂದಿ ಮೃತ ಪಟ್ಟಿರುವರು ಎಂದು ಅಕೃತ ಮೂಲಗಳಿಂದ ತಿಳಿದು ಬಂದಿದೆ.
 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss