Thursday, August 11, 2022

Latest Posts

ದಕ್ಷಿಣ ಕನ್ನಡದಲ್ಲಿ 241 ಮಂದಿ ಗುಣಮುಖ, 201 ಮಂದಿಗೆ ಸೋಂಕು

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸೋಮವಾರ 241 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಇದರಲ್ಲಿ ಕೋವಿಡ್ ಕೇರ್ ಸೆಂಟರ್‌ನ 3 ಮಂದಿ, ಗೃಹ ಕೇರ್ ಸೆಂಟರ್‌ನ 180 ಮತ್ತು ಆಸ್ಪತ್ರೆಗಳಿಂದ ಬಿಡುಗಡೆಯಾದ 58 ಮಂದಿ ಸೇರಿದ್ದಾರೆ. ಈ ತನಕ ಒಟ್ಟು 7,918 ಮಂದಿ ಗುಣಮುಖರಾಗಿದ್ದಾರೆ.
201 ಮಂದಿಗೆ ಕೋವೀಡ್ ಸೋಂಕು ತಗಲಿರುವುದು ದೃಢ ಪಟ್ಟಿದೆ. ಮಂಗಳೂರಿನ 144, ಬಂಟ್ವಾಳದ 22, ಪುತ್ತೂರಿನ 05, ಸುಳ್ಯದ 05, ಬೆಳ್ತಂಗಡಿಯ 07 ಮತ್ತು ಹೊರ ಜಿಲ್ಲೆಗಳ 18 ಮಂದಿಗೆ ಸೋಂಕು ದೃಢ ಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ 10.330ಕ್ಕೆ ಹೆಚ್ಚಿದೆ.
ಪ್ರಾಥಮಿಕ ಸಂಪರ್ಕದಿಂದ 49 ಮಂದಿಯಲ್ಲಿ, ಶೀತಜ್ವರದಿಂದ ಬಳಲುತ್ತಿದ್ದ 70 ಮಂದಿಯಲ್ಲಿ ಹಾಗೂ ತೀವ್ರ ಉಸಿರಾಟದ ತೊಂದರೆಗೆ ಒಳಪಟ್ಟ 9 ಮಂದಿಯಲ್ಲಿ ಸೋಂಕು ಖಚಿತಗೊಂಡಿದೆ. 72 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಒಬ್ಬರು ಪ್ರಯಾಣದ ಹಿನ್ನೆಲೆ ಹೊಂದಿರುವರು ಎಂದು ಜಿಲ್ಲಾಡಳಿತ ತಿಳಿಸಿದೆ.
ಸೋಮವಾರ 6 ಸಾವು ಸಂಭವಿಸಿದೆ. ಇದರಲ್ಲಿ ಮಂಗಳೂರಿನ ಮೂವರು, ಬಂಟ್ವಾಳದ ಇಬ್ಬರು ಸೇರಿದ್ದಾರೆ. ಒಬ್ಬರು ಹೊರ ಜಿಲ್ಲೆಯವರು. ಈ ತನಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 316 ಮಂದಿ ಮೃತ ಪಟ್ಟಿರುವರು ಎಂದು ಅಕೃತ ಮೂಲಗಳಿಂದ ತಿಳಿದು ಬಂದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss