Saturday, June 25, 2022

Latest Posts

ದಕ್ಷಿಣ ಕನ್ನಡದಲ್ಲಿ 3 ಪಾಸಿಟಿವ್… ಇಲ್ಲ ಇಲ್ಲ ಒಂದೂ ಇಲ್ಲ ಪಾಸಿಟಿವ್… ಗೊಂದಲ ಸೃಷ್ಟಿಸಿದ ಬುಲೆಟಿನ್‌!

ಮಂಗಳೂರು: ಕೊರೋನಾ ಸೋಂಕಿತರ ವಿವರ ನೀಡುವಾಗ ಆರೋಗ್ಯ ಇಲಾಖೆಯ ಗೊಂದಲ ಮಂಗಳವಾರವೂ ಮುಂದುವರೆದಿದೆ.
ಕತಾರ್‌ನಿಂದ ಬೆಂಗಳೂರಿಗೆ ಆಗಮಿಸಿ ಅಲ್ಲಿಯೇ ಕ್ವಾರಂಟೈನ್‌ನಲ್ಲಿ ಇದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ ಮಂಗಳವಾರ ಕೊರೋನಾ ಸೋಂಕು ದೃಢಗೊಂಡಿದೆ. ಅವರಿಗೆ ಬೆಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸೋಮವಾರ ಮಧ್ಯಾಹ್ನ ಬಿಡುಗಡೆಗೊಳಿಸಿದ ರಾಜ್ಯದ ಹೆಲ್ತ್ ಬುಲೆಟಿನ್‌ನಲ್ಲಿ ಉಲ್ಲೇಖ ಮಾಡಲಾಗಿತ್ತು. ಇದರ ಆಧಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ ಮಂಗಳವಾರ ಕೊರೋನಾ ದೃಢಗೊಂಡಿದ್ದು, ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
37 ವರ್ಷದ ಪುರುಷ (ರೋಗಿ ಸಂಖ್ಯೆ 2193), 30 ವರ್ಷದ ಪುರುಷ (ರೋಗಿ ಸಂಖ್ಯೆ 2195), 30 ವರ್ಷದ ಪುರುಷ (ರೋಗಿ ಸಂಖ್ಯೆ 2196) ದಕ್ಷಿಣ ಕನ್ನಡ ಜಿಲ್ಲೆಯವರು ಎಂದು ಹೇಳಲಾಗಿತ್ತು. ಆದರೆ, ಸಂಜೆಯ ರಾಜ್ಯ ಮತ್ತು ಜಿಲ್ಲೆಯ ಹೆಲ್ತ್ ಬುಲೆಟಿನ್‌ನಲ್ಲಿ ಈ ಬಗ್ಗೆ ಉಲ್ಲೇಖ ಇರದೇ ದ.ಕ.ದಲ್ಲಿ ಯಾವುದೇ ಪಾಸಿಟಿವ್ ಇಲ್ಲ ಎಂದು ಉಲ್ಲೇಖಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss