Wednesday, July 6, 2022

Latest Posts

ದಕ್ಷಿಣ ಕನ್ನಡದಲ್ಲಿ 64 ಮಂದಿ ಗುಣಮುಖ, 202 ಮಂದಿಗೆ ಸೋಂಕು

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಂಗಳವಾರ 64 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದರಲ್ಲಿ ಕೋವಿಡ್ ಕೇರ್ ಸೆಂಟರ್‌ನ 2, ಗೃಹ ಕೇರ್ ಸೆಂಟರ್‌ನ 50 ಮತ್ತು ಆಸ್ಪತ್ರೆಗಳಿಂದ ಬಿಡುಗಡೆಯಾದ 12 ಮಂದಿ ಸೇರಿದ್ದಾರೆ. ಈ ತನಕ ಒಟ್ಟು 7.193 ಮಂದಿ ಗುಣಮುಖರಾಗಿದ್ದಾರೆ.
202 ಮಂದಿಗೆ ಕೋವೀಡ್ ಸೋಂಕು ತಗಲಿರುವುದು ದೃಢ ಪಟ್ಟಿದೆ. ಮಂಗಳೂರಿನ 139, ಬಂಟ್ವಾಳದ 35, ಪುತ್ತೂರಿನ 11, ಸುಳ್ಯದ 3, ಬೆಳ್ತಂಗಡಿಯ 4 ಮತ್ತು ಹೊರ ಜಿಲ್ಲೆಗಳ 10 ಮಂದಿಗೆ ಸೋಂಕು ದೃಢ ಪಟ್ಟಿದೆ.
ಪ್ರಾಥಮಿಕ ಸಂಪರ್ಕದಿಂದ 41 ಮಂದಿಯಲ್ಲಿ, ಶೀತಜ್ವರದಿಂದ ಬಳಲುತ್ತಿದ್ದ 81 ಮಂದಿಯಲ್ಲಿ ಮತ್ತು ತೀವ್ರ ಉಸಿರಾಟದ ತೊಂದರೆಗೆ ಒಳಪಟ್ಟ 9 ಮಂದಿಯಲ್ಲಿ ಸೋಂಕು ಖಚಿತಗೊಂಡಿದೆ. 69 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಶುಕ್ರವಾರ 5 ಸಾವು ಸಂಭವಿಸಿದೆ. ಇದರಲ್ಲಿ ಮಂಗಳೂರಿನ ಒಬ್ಬರು, ಬಂಟ್ವಾಳದ ಇಬ್ಬರು, ಪುತ್ತೂರಿನ ಒಬ್ಬರು ಮತ್ತು ಇತರ ಜಿಲ್ಲೆಗಳ ಒಬ್ಬರು ಸೇರಿದ್ದಾರೆ. ಈ ತನಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 301 ಮಂದಿ ಮೃತ ಪಟ್ಟಿರುವರು ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss