ಉಡುಪಿ: ಸಮುದಾಯದಲ್ಲಿ ಕೋವಿಡ್ -19 ಪ್ರಕರಣಗಳು ಪತ್ತೆಯಾಗುತ್ತಿದ್ದರೆ ಸೋಂಕು ಪಸರುವಿಕೆ ಹತೋಟಿಗೆ ತರುವುದಕ್ಕಾಗಿ ಮಾಡುತ್ತಿದ್ದ ಸೀಲ್ ಡೌನ್ ಪರಿಕಲ್ಪನೆಯನ್ನೇ ರದ್ದುಗೊಳಿಸಲಾಗುತ್ತದೆ ಎಂದು ಮುಜರಾಯಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸೀಲ್ ಡೌನ್ ಗೊಂದಲದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಡೀ ರಾಜ್ಯದಲ್ಲಿ ಸೀಲ್ ಡೌನ್ ಪರಿಕಲ್ಪನೆಯನ್ನು ರದ್ದು ಪಡಿಸಿ, ಕೇವಲ ನಿರ್ಬಂಧಿತ ಪ್ರದೇಶ (ಕಂಟೈನ್ಮೆಂಟ್ ಝೋನ್)ವನ್ನು ಮಾತ್ರ ಮುಂದುವರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಒಂದು ಪ್ರದೇಶದಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುವುದರಿಂದ ಸೀಡ್ ಡೌನ್ ಮುಂದುವರಿಯುತ್ತಲೇ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಅದು ಪುನರಾವರ್ತಿತ ಆಗುತ್ತಿದೆ. ಆದ್ದರಿಂದ ಇನ್ನು ಮುಂದೆ ಸೋಂಕು ಪತ್ತೆಯಾದ ಮನೆಯನ್ನು ಮಾತ್ರ ನಿರ್ಬಂಧಿತ ಪ್ರದೇಶವನ್ನಾಗಿ ಗುರುತಿಸಿ, ಆದೇಶಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.