ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇನ್ನೂ 730 ಮಂದಿಯ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ.
ದುಬೈನಿಂದ ಮೇ 18ರಂದು ವಿಮಾನದಲ್ಲಿ ಆಗಮಿಸಿದವರು ಸಹಿತ 730 ಮಂದಿಯ ಪರೀಕ್ಷಾ ವರದಿಯಲ್ಲಿ ಇನ್ನು ಎಷ್ಟು ಮಂದಿಗೆ ಕೊರೋನಾ ದೃಢಪಡಲಿದೆ ಎಂಬುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ದುಬೈನಿಂದ ಆಗಮಿಸಿದ ಮೊದಲ ವಿಮಾನದಲ್ಲಿ ಇದ್ದ ಕರಾವಳಿಯ 21 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು.
ಕೊರೋನಾ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಬುಧವಾರ 180 ಮಂದಿಯ ಪರೀಕ್ಷಾ ವರದಿ ಬಂದಿದ್ದು, 1 ಪಾಸಿಟಿವ್, 180 ನೆಗೆಟಿವ್ ಆಗಿದೆ. 428 ಮಂದಿಯ ವರದಿ ನಿರೀಕ್ಷಿಸಲಾಗಿದೆ. 302 ಮಂದಿಯನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. 13 ಮಂದಿಯನ್ನು ಅಬ್ಸರ್ವೆಶನ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆ ಇರುವ 11 ಪ್ರಕರಣ ವರದಿಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.
ಇದುವರೆಗೆ ಒಟ್ಟು 5143 ಮಂದಿಯ ಪರೀಕ್ಷಾ ವರದಿ ಸ್ವೀಕರಿಸಿದ್ದು, 55 ಪಾಸಿಟಿವ್, 5088 ನೆಗೆಟಿವ್ ಆಗಿದೆ. ಪಾಸಿಟಿವ್ ಪ್ರಕರಣ ಪೈಕಿ 30 ಮಂದಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರು ಮೃತಪಟ್ಟಿದ್ದಾರೆ. 20 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.