ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ 220 ಗ್ರಾಮ ಪಂಚಾಯತುಗಳಿಗೆ ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ 91 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.22ರಂದು ನಡೆಯುವ ಪ್ರಥಮ ಹಂತದ ಚುನಾವಣೆಗೆ ನಾಮಪತ್ರ ಹಾಕಿರುವ ಆಕಾಂಕ್ಷಿಗಳಲ್ಲಿ 50 ಮತ್ತು ಡಿ.27ರಂದು ನಡೆಯಲಿರುವ ದ್ವಿತೀಯ ಹಂತದಲ್ಲಿ ಸ್ಪರ್ಧಿಸಲು ನಾಮಪತ್ರ ಹಾಕಿರುವವರ ಪೈಕಿ 41ಮಂದಿ ಅವಿರೋಧ ಆಯ್ಕೆ ಆಗಿರುವರು ಎಂದು ಜಿಲ್ಲಾಡಳಿತ ತಿಳಿಸಿದೆ.
ಚುನಾವಣೆ ನಡೆಯಲಿರುವ 3,132 ಸ್ಥಾನಗಳಿಗೆ 7,275 ಅಭ್ಯರ್ಥಿಗಳು ಕಣದಲ್ಲಿದ್ದಾರೆ.