Tuesday, June 28, 2022

Latest Posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 8 ಮಂದಿಗೆ ಕೊರೋನಾ ದೃಢ: ತೀವ್ರ ಉಸಿರಾಟ ಸಮಸ್ಯೆ, ಶೀತ ಜ್ವರ ಇದ್ದವರಿಗೂ ಸೋಂಕು ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 8 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 453 ಕ್ಕೆ ಏರಿಕೆಯಾಗಿದೆ.
ವಿದೇಶದಿಂದ ಆಗಮಿಸಿದವರು ಹಾಗೂ ಮಹಾರಾಷ್ಟ್ರದಿಂದ ಬಂದವರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಅದರ ಜತೆಗೆ ಈಗ ತೀವ್ರ ಉಸಿರಾಟ ಸಮಸ್ಯೆ ಮತ್ತು ಶೀತಜ್ವರದ ಲಕ್ಷಣ ಇದ್ದವರಲ್ಲಿ ಕೊರೋನಾ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಮೂಲ ಪತ್ತೆ ಆಗದೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನತೆಯ ಭೀತಿಗೆ ಕಾರಣವಾಗಿದೆ.
ಮಂಗಳವಾರ ಪತ್ತೆಯಾದ 8 ಪ್ರಕರಣಗಳ ಪೈಕಿ ನಾಲ್ವರಿಗೆ ದ್ವಿತೀಯ ಸಂಪರ್ಕದಿಂದ ಸೋಂಕು ಅಂಟಿದೆ. 21 ವರ್ಷದ ಯುವಕ ರೋಗಿ ಸಂಖ್ಯೆ 8318  ರಿಂದ 50 ಮತ್ತು 17 ವರ್ಷದ ಪುರುಷ, 28 ಮತ್ತು 25 ವರ್ಷದ ಮಹಿಳೆಗೆ ಕೊರೋನಾ ಕಾಣಿಸಿಕೊಂಡಿದೆ. 21 ವರ್ಷದ ಯುವಕನಿಗೆ (ರೋಗಿ ಸಂಖ್ಯೆ 8318) ಶೀತ ಜ್ವರದ ಲಕ್ಷಣ ಇದ್ದ 22 ವರ್ಷದ ಗಂಡಸು ರೋಗಿ ಸಂಖ್ಯೆ8005  ರಿಂದ ಸೋಂಕು ಹರಡಿದೆ. ಈ ರೀತಿಯಾಗಿ ಸರಪಣಿಯಾಗಿ ಸೋಂಕು ಪಸರಿಸುತ್ತಿರುವುದು ಗಂಭೀರ ಪ್ರಕರಣವಾಗಿದೆ.
ಉಳಿದ ನಾಲ್ವರ ಪೈಕಿ ಇಬ್ಬರು ಉಸಿರಾಟದ ಸಮಸ್ಯೆಯೊಂದಿಗೆ ಪರೀಕ್ಷೆಗೆ ಒಳಗಾದವರು. ತೀವ್ರ ಉಸಿರಾಟದ ಸಮಸ್ಯೆ ಇದ್ದ 49 ವರ್ಷದ ಪುರುಷ ಮತ್ತು 59 ವರ್ಷದ ಮಹಿಳೆಗೆ ಕೊರೋನಾ ದೃಢಪಟ್ಟಿದೆ. ಶೀತ ಜ್ವರದ ಲಕ್ಷಣ ಇದ್ದ 27 ವರ್ಷದ ಯುವತಿಗೆ ಹಾಗೂ ಕುವೈಟ್‌ನಿಂದ ಆಗಮಿಸಿದ 27 ವರ್ಷದ ಯುವಕನಿಗೆ ಕೊರೋನಾ ಕಾಣಿಸಿಕೊಂಡಿದೆ. ಸೋಮವಾರ ಜಿಲ್ಲೆಯಲ್ಲಿ 12 ಮಂದಿಯಲ್ಲಿ ಕೊರೋನಾ ದೃಢಪಟ್ಟಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss