ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ನಡುವೆಯೂ ವಿದೇಶದಿಂದ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಡಿಗೋ ಚಾರ್ಟರ್ಡ್ ವಿಮಾನದಲ್ಲಿ 170 ಮಂದಿ ಪ್ರಯಾಣಿಕರು ದಮಾಮ್ನಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಅವರೆಲ್ಲರನ್ನು ಮಂಗಳೂರಿನಲ್ಲೇ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಗುರುವಾರ ಎರಡು ವಿಮಾನ
ಜು.2ರಂದು ದುಬೈ ಹಾಗೂ ಶಾರ್ಜಾದಿಂದ ಚಾರ್ಟರ್ಡ್ ವಿಮಾನಗಳು ಮಂಗಳೂರಿಗೆ ಆಗಮಿಸಲಿದೆ. ದುಬೈ ಕಲ್ಚರಲ್ ಫೌಂಡೇಶನ್ನಿಂದ 680 ಪ್ರಯಾಣಿಕರುಳ್ಳ ಏರ್ ಅರೇಬಿಯಾ ಚಾರ್ಟರ್ಡ್ ವಿಮಾನ ಮಧ್ಯಾಹ್ನ ತಲುಪಿದರೆ, ವಕ್ವಾಡಿ ಪ್ರವೀಣ್ ಕುಮಾರ್ ಪ್ರಯತ್ನದಲ್ಲಿ ಶಾರ್ಜಾದಿಂದ ಮಂಗಳೂರಿಗೆ 170 ಪ್ರಯಾಣಿಕರ ಚಾರ್ಟರ್ಡ್ ವಿಮಾನ ಸಂಜೆ ಆಗಲಿಸಲಿದೆ.