Tuesday, June 28, 2022

Latest Posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಕೊರೋನಾ ಆರ್ಭಟ: ಗುರುವಾರ ಬರೋಬ್ಬರಿ 90 ಮಂದಿಗೆ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಜನತೆಯನ್ನು ಇನ್ನಿಲ್ಲದೆ ಕಾಡಿದ ಕೊರೋನಾ ಈಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕಂಟಕ ತಂದಿತ್ತಿದೆ. ಗುರುವಾರ ಬರೋಬ್ಬರಿ 90 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಗುರುವಾರ ಬಂದ ಪ್ರಕರಣಗಳ ಪೈಕಿ 19 ಶೀತಜ್ವರ ಪ್ರಕರಣ, ಉಸಿರಾಟ ಸಮಸ್ಯೆಯಿದ್ದ 8 ಮಂದಿ,  ವಿದೇಶದಿಂದ ಬಂದವರು 15, ಪ್ರಾಥಮಿಕ ಸಂಪರ್ಕದಿಂದ 31ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, 17 ಮಂದಿಯ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಗುರುವಾರ ಬಂದ ಒಟ್ಟು 130   ವರದಿಗಳ ಪೈಕಿ 90ಪಾಸಿಟಿವ್ ೪೦ ನೆಗೆಟಿವ್ ಆಗಿದೆ. ಇನ್ನು 427 ವರದಿಗಳು ಬರಲು ಬಾಕಿ ಇದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 923 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss