Sunday, August 14, 2022

Latest Posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 163 ಮಂದಿಗೆ ಕೊರೋನಾ ಪಾಸಿಟಿವ್, 45 ಮಂದಿ ಗುಣಮುಖ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಗೆ ಭಾನುವಾರ 10 ಮಂದಿ ಬಲಿಯಾಗಿದ್ದು, 163 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 45 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ಆರು ಸಾವಿರದ ಗಡಿ ದಾಟಿದೆ. ಭಾನುವಾರ ದೃಢಪಟ್ಟ 163  ಪ್ರಕರಣಗಳ ಪೈಕಿ 107 ಮಂದಿ ಮಂಗಳೂರು ತಾಲೂಕು ನಿವಾಸಿಗಳು. ಬಂಟ್ವಾಳ-13, ಬೆಳ್ತಂಗಡಿ-19, ಪುತ್ತೂರು-11, ಸುಳ್ಯ-1 ಪ್ರಕರಣ ವರದಿಯಾಗಿದೆ. 9 ಮಂದಿ ಹೊರಜಿಲ್ಲೆ, ಮೂವರು ಹೊರರಾಜ್ಯಕ್ಕೆ ಸೇರಿದವರು.
ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 3116ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 6015 ಆಗಿದೆ. ಒಟ್ಟು 2730 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 169 ಮಂದಿ ಮೃತಪಟ್ಟಿದ್ದಾರೆ ಎಂದು ದ.ಕ. ಜಿಲ್ಲಾಡಳಿತದ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss