Saturday, August 13, 2022

Latest Posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 153 ಮಂದಿಗೆ ಪಾಸಿಟಿವ್, 124 ಮಂದಿ ಗುಣಮುಖ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೆ 7 ಮಂದಿ ಬಲಿಯಾಗಿದ್ದು, ಸೋಮವಾರ 153 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 124 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಮವಾರ ದೃಢಗೊಂಡ 153 ಪಾಸಿಟಿವ್ ಪ್ರಕರಣಗಳ ಪೈಕಿ 119 ಮಂದಿ ಮಂಗಳೂರು ತಾಲೂಕು ನಿವಾಸಿಗಳು. ಬಂಟ್ವಾಳ-11, ಬೆಳ್ತಂಗಡಿ-6, ಪುತ್ತೂರು-4, ಸುಳ್ಯ ತಾಲೂಕಿನ ಒಬ್ಬರಿಗೆ ಕೊರೋನಾ ಕಾಣಿಸಿಕೊಂಡಿದೆ. ಮೃತ ಏಳು ಮಂದಿ ಮಂಗಳೂರು ತಾಲೂಕಿನವರು.
ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 3138 ಆಗಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 6128ಕ್ಕೆ ಏರಿಕೆಯಾಗಿದೆ. 2857 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 176ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಿಂಹಪಾಲು ಮಂಗಳೂರು ತಾಲೂಕಿಗೆ ಸೇರಿದೆ. ಮಂಗಳೂರಿನಲ್ಲಿ ಇದುವರೆಗೆ 4394 ಮಂದಿಗೆ ಕೊರೋನಾ ವಕ್ಕರಿಸಿದೆ. ಮೂಡುಬಿದಿರೆ-93, ಮುಲ್ಕಿ-90, ಬಂಟ್ವಾಳ-571, ಬೆಳ್ತಂಗಡಿ-260, ಪುತ್ತೂರು-267, ಕಡಬ-53, ಸುಳ್ಯ-72 ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss