ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬರಬೇಕಿದೆ 778 ಮಂದಿಯ ಕೊರೋನಾ ಪರೀಕ್ಷಾ ವರದಿ!!

0
60

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಓರ್ವ ಮಹಿಳೆಗೆ ಕೊರೋನಾ ಪಾಸಿಟಿವ್ ಆಗಿದ್ದು, ಗುರುವಾರ ಮೂಡಬಿದಿರೆ ಕಡಂದಲೆ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೂ ಕೊರೋನಾ ಅಂಟಿರುವುದು ದೃಢಪಟ್ಟಿದೆ. ಇನ್ನೂ 778 ಮಂದಿಯ ವರದಿ ಬರಬೇಕಿದೆ.
ಕೊರೋನಾ ಸಂಬಂಧಿಸಿ ಶುಕ್ರವಾರ ದೊರೆತ 26 ಮಂದಿಯ ಪರೀಕ್ಷಾ ವರದಿಯಲ್ಲಿ 2 ಪಾಸಿಟಿವ್ (ಈ ಪೈಕಿ ಒಂದು ಕಡಂದಲೆ ಶಾಲೆಯಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ), 24 ನೆಗೆಟಿವ್ ಆಗಿದೆ. 580 ಮಂದಿಯ ವರದಿ ನಿರೀಕ್ಷಿಸಲಾಗಿದೆ. 198 ಮಂದಿಯನ್ನು ಹೊಸದಾಗಿ ಪರೀಕ್ಷಗೆ ಒಳಪಡಿಸಲಾಗಿದೆ. ಅಬ್ಸರ್ವೆಶನ್‌ಗಾಗಿ 13 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟ ತೊಂದರೆ ಇರುವ ನಾಲ್ಕು ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 63 ಪಾಸಿಟವ್ ಪ್ರಕರಣ ವರದಿಯಾಗಿದೆ. ಈ ಪೈಕಿ 36 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 21 ಮಂದಿ ಗುಣಮುಖಗೊಂಡಿದ್ದಾರೆ. ಐವರು ಮೃತಪಟ್ಟಿದ್ದಾರೆ. ಓರ್ವ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here