ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 446 ಮಂದಿಗೆ ಕರೋನಾ ಸೋಂಕು ದೃಢ ಪಟ್ಟಿದೆ. ಮಂಗಳೂರಿನ 248, ಬಂಟ್ವಾಳದ 85, ಪುತ್ತೂರಿನ 13, ಸುಳ್ಯದ 23 ಮತ್ತು ಬೆಳ್ತಂಗಡಿಯ 52 ಮಂದಿ ಹೊಸ ಸೋಂಕಿತರಾಗಿದ್ದಾರೆ. ಸೋಂಕಿತರ ಪೈಕಿ 25 ಮಂದಿ ಹೊರ ಜಿಲ್ಲೆಗಳವರಾಗಿದ್ದಾರೆ.
170 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 177 ಮಂದಿ ಶೀತಜ್ವರದಿಂದ ಬಳಲಿದವರು ಮತ್ತು 11 ಮಂದಿಗೆ ತೀವ್ರ ಉಸಿರಾಟದ ತೊಂದರೆ ಇತ್ತು. 88 ಮಂದಿಯ ಸೋಂಕಿನ ಮೂಲದ ಪತ್ರೆಗೆ ಶ್ರಮಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಶುಕ್ರವಾರ 197 ಮಂದಿ ಸೋಂಕು ಮುಕ್ತರಾಗಿದ್ದಾರೆ. ಇದರಲ್ಲಿ ೧೫೩ ಮಂದಿ ಹೋಮ್ ಐಸೋಲೇಶನ್ ಮತ್ತು 44 ಮಂದಿ ವಿವಿಧ ಆಸ್ರತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದರು. ಈ ತನಕ ಗುಣಮುಖ ಹೊಂದಿದವರ ಸಂಖ್ಯೆ 12,609ಕ್ಕೆ ಏರಿಕೆಯಾಗಿದೆ. 7 ಮಂದಿ ಶುಕ್ರವಾರ ಮೃತ ಪಟ್ಟಿದ್ದಾರೆ. ಮೂವರು ಮಂಗಳೂರು ತಾಲೂಕಿನವರು. ಮಿಕ್ಕ ನಾಲ್ವರು ಹೊರ ಜಿಲ್ಲೆಯವರು. ಈ ತನಕ ಒಟ್ಟು 434 ಮಂದಿ ಮೃತ ಪಟ್ಟಂತಾಗಿದೆ