ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 316 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. 322 ಮಂದಿ ಗುಣಮುಖರಾಗಿದ್ದಾರೆ. ಐವರು ಮೃತಪಟ್ಟಿದ್ದಾರೆ.
ಮಂಗಳೂರು ತಾಲೂಕಿನ 148, ಬಂಟ್ವಾಳದ 44, ಪುತ್ತೂರಿನ 42, ಸುಳ್ಯದ 20, ಬೆಳ್ತಂಗಡಿಯ 37 ಹಾಗೂ ಹೊರಜಿಲ್ಲೆಯ 25 ಮಂದಿ ಸೋಂಕಿತರಾಗಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 108, ಶೀತಜ್ವರದ ಲಕ್ಷಣದೊಂದಿಗೆ 166 ಮಂದಿ, ಉಸಿರಾಟ ಸಮಸ್ಯೆಯೊಂದಿಗೆ 11 ಮಂದಿಗೆ ಸೋಂಕು ಬಾಧಿಸಿದೆ. 31 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.
ಗುಣಮುಖಗೊಂಡ 322 ಜನರ ಪೈಕಿ120 ಮಂದಿ ಮನೆಯಲ್ಲಿ, 202 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತಪಟ್ಟವರಲ್ಲಿ ಮೂವರು ಮಂಗಳೂರು ತಾಲೂಕು, ತಲಾ ಒಬ್ಬರು ಬಂಟ್ವಾಳ, ಪುತ್ತೂರು ತಾಲೂಕಿನವರು.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 18092ಕ್ಕೆ ಏರಿಕೆಯಾಗಿದೆ. ಈ ಪೈಕಿ 4034 ಸಕ್ರಿಯ ಪ್ರಕರಣಗಳಾಗಿವೆ. 13606 ಮಂದಿ ಗುಣಮುಖರಾಗಿದ್ದಾರೆ. 452 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಬುಲೆಟಿನ್ನಲ್ಲಿ ಮಾಹಿತಿ ನೀಡಲಾಗಿದೆ.