Wednesday, August 17, 2022

Latest Posts

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 404 ಗುಣಮುಖ, 233 ಕೊರೋನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 233 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 404 ಮಂದಿ ಗುಣಮುಖರಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ.
ಸೋಂಕಿತರ ಪೈಕಿ 122 ಮಂದಿ ಮಂಗಳೂರು ತಾಲೂಕು ನಿವಾಸಿಗಳು. ಬಂಟ್ವಾಳದ 53, ಪುತ್ತೂರಿನ 6, ಸುಳ್ಯದ 5, ಬೆಳ್ತಂಗಡಿ 10, ಹೊರಜಿಲ್ಲೆಯ 37 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 78 ಮಂದಿಗೆ, ಶೀತಜ್ವರದ ಲಕ್ಷಣದೊಂದಿಗೆ 105 ಜನರಿಗೆ, ಉಸಿರಾಟ ಸಮಸ್ಯೆಯ 9 ಮಂದಿಗೆ ಕೊರೋನಾ ಬಾಧಿಸಿದೆ. 41 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.
ಗುಣಮುಖಗೊಂಡವರ ಪೈಕಿ 219 ಮಂದಿ ಮನೆಯಲ್ಲಿ, 185 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತಪಟ್ಟವರ ಪೈಕಿ ಐವರು ಮಂಗಳೂರು ತಾಲೂಕು ನಿವಾಸಿಗಳು. ತಲಾ ಒಬ್ಬರು ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನವರು. ಉಳಿದ ಒಬ್ಬರು ಹೊರಜಿಲ್ಲೆಯವರು.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 20367ಕ್ಕೆ ಏರಿಕೆಯಾಗಿದೆ. ಈ ಪೈಕಿ 4371 ಸಕ್ರಿಯ ಪ್ರಕರಣಗಳು. 15505 ಮಂದಿ ಗುಣಮುಖರಾಗಿದ್ದಾರೆ. 490 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!