Tuesday, July 5, 2022

Latest Posts

ದಕ್ಷಿಣ ಕನ್ನಡ ಜಿಲ್ಲೆಯ 38 ಮಂದಿ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 29 ಸಾಧಕರು ಮತ್ತು 9ಸಂಘಟಣೆಗಳನ್ನು 2020ನೆಯ ಸಾಲಿನ ರಾಜ್ಯೋತ್ಸವ ಸಂದರ್ಭದ ಜಿಲ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಶುಕ್ರವಾರ ಸಂಜೆ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಶಸ್ತಿ ಪುರಸ್ಕೃತರು:
ಪ್ರೊ.ಎ.ವಿ.ನಾವಡ, ಮಂಗಳೂರು(ಸಾಹಿತ್ಯ-ಶಿಕ್ಷಣ),
ಡಾ.ಯು.ವಿ.ಶೆಣೈ ಮಂಗಳೂರು (ವೈದ್ಯಕೀಯ), ನವೋದಯ ಮಿತ್ರ ಕಲಾ
ವೃಂದ ನೆತ್ತರಕೆರೆ, ಬಂಟ್ವಾಳ (ಸಮಾಜಸೇವೆ), ಅಬ್ದುಲ್ ಸತ್ತಾರ್ ಗೂಡಿನಬಳಿ ಬಂಟ್ವಾಳ (ಸಾಹಸ-ಕ್ರೀಡೆ), ಎಂ.ಸುಬ್ರಹ್ಮಣ್ಯ ಭಟ್ ಮಂಜಿನಡ್ಕ,
ಬಂಟ್ವಾಳ (ಸಮಾಜಸೇವೆ), ಬಿ.ಚೇತನ್ ರೈ ಮಾಣಿ (ರಂಗಭೂಮಿ-ಚಲನಚಿತ್ರ)  ದೊಡ್ಡಣ್ಣ ಬರೆಮೇಲು, ಸುಳ್ಯ(ಕ್ರೀಡೆ), ಕೆ.ವಿಶ್ವನಾಥ ಪೈ ಐವರ್ನಾಡು (ಕೃಷಿ),
ಸುಂದರ ದೇವಾಡಿಗ ಅಳದಂಗಡಿ, ಬೆಳ್ತಂಗಡಿ(ವಾದ್ಯ ಕಲಾವಿದ), ಡಾ.ವೇಣುಗೋಪಾಲ ಶರ್ಮ, ಗುರುವಾಯನಕೆರೆ (ವೈದ್ಯಕೀಯ), ವೀರ ಕೇಸರಿ ಧರ್ಮಸ್ಥಳ (ಸಮಾಜಸೇವೆ), ಡಾ.ವೈ.ಉಮಾನಾಥ ಶೆಣೈ ಬೆಳ್ತಂಗಡಿ (ಇತಿಹಾಸ), ಗಣೇಶ ಕೊಲೆಕಾಡಿ ಮೂಲ್ಕಿ (ಯಕ್ಷಗಾನ), ಗಂಗಯ್ಯ ಪರವ, ಮೂಡುಬಿದಿರೆ (ದೈವ ಪಾತ್ರಿ), ಬಿ.ಟಿ.ರಂಜನ್ ಶೆಣೈ (ಪತ್ರಿಕೋದ್ಯಮ), ಭಾಸ್ಕರ, ಆದರ್ಶನಗರ ಪಾಲಡ್ಕ, ಮೂಡುಬಿದಿರೆ (ಕ್ರೀಡೆ), ವಿದ್ಯಾ ವಿನಾಯಕ ಯುವಕ ಮಂಡಲ, ಹಳೆಯಂಗಡಿ (ಸಾಮಾಜಿಕ-ಶೈಕ್ಷಣಿಕ) ಎ.ಕೆ.ಮೊಯ್ದೀನ್ ಹಾಜಿ, ಉಳ್ಳಾಲ (ಸಮಾಜಸೇವೆ), ಕೆ.ಸೀತಾರಾಮ ಬಂಗೇರ ಕೊಲ್ಯ (ಸಾಮಾಜಿಕ-ಧಾರ್ಮಿಕ), ಸೇಸಪ್ಪ ಪೂಜಾರಿ  ಫಜೀರು, ಬಂಟ್ವಾಳ (ಸಮಾಜ ಸೇವೆ).
ಡಾ.ಮುರಳಿ ಕುಮಾರ್, ಉರ್ವ ಚಿಲಿಂಬಿ (ನಾಟಿ ವೈದ್ಯ), ಹ್ಯೂಮನ್ ರೈಟ್ಸ್  ಫೆಡರೇಶನ್ ಆಫ್ ಇಂಡಿಯಾ, ಕುದ್ರೋಳಿ (ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಸಮಿತಿ, ಹಂಪನಕಟ್ಟೆ (ಸಮಾಜಸೇವೆ), ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್, ಮಂಗಳೂರು (ಸಮಾಜಸೇವೆ), ಅನಂತ ಪ್ರಭು ಜಿ. ಬಲ್ಮಠ ಮಂಗಳೂರು (ಸಮಾಜ ಸೇವೆ), ಶ್ರೀನಿವಾಸ ನಾಯಕ್, ಮಂಗಳೂರು(ದೃಶ್ಯ ಮಾಧ್ಯಮ), ಜಿನ್ನಪ್ಪ ಗೌಡ ಬೆಳಾಲು ಬೆಳ್ತಂಗಡಿ (ಪತ್ರಿಕೋದ್ಯಮ).
ವಿದುಷಿ ನಯನಾ ವಿ.ರೈ ಸುಳ್ಯಪದವು, ಪುತ್ತೂರು (ನೃತ್ಯ),ಕಸ್ತೂರ್ಬಾ ಸಂಜೀವಿನಿ ಸ್ವ ಸಹಾಯ ಮಹಿಳಾ ಸಂಘ, ಬೆಳಾಲು, ಬೆಳ್ತಂಗಡಿ (ಕೃಷಿ), ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ (ಸಮಾಜಸೇವೆ), ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ, ಹಂಪನಕಟ್ಟೆ,(ಹೊರನಾಡು ಕನ್ನಡಿಗ-ಸಮಾಜಸೇವೆ), ಜೈಭಾರತಿ ತರುಣ ವೃಂದ ಉರ್ವ, ಮಂಗಳೂರು(ಸಮಾಜಸೇವೆ), ಚಂದ್ರಶೇಖರ ಹೆಗಡೆ ಪಡ್ನೂರು ಪುತ್ತೂರು (ಕಲೆ), ಯೋಗೀಶ್ ಕಾಂಚನ್ (ಸಾಹಿತ್ಯ), ಪ್ರಜ್ವಲ್ ಯುವಕ ಮಂಡಲ ಸೂಟರ್ ಪೇಟೆ (ಸಾಮಾಜಿಕ-ಶೈಕ್ಷಣಿಕ), ಕದ್ರಿ ಕ್ರಿಕೆಟರ್‍ಸ್ ಕದ್ರಿ ಮಂಗಳೂರು ((ಸಮಾಜ ಸೇವೆ) ಪದ್ಮನಾಭ ಸುರತ್ಕಲ್ (ಶಿಲ್ಪ ಕಲೆ), ಬಂಟರ ಸಂಘ ಸುರತ್ಕಲ್ (ಸಮಾಜ).
ನಾಳೆ ನ.೧ರಂದು ಪೂರ್ವಾಹ್ನ ೯ ಗಂಟೆಗೆ ನಗರದ ಕೇಂದ್ರ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss