Sunday, August 14, 2022

Latest Posts

ದಕ್ಷಿಣ ಕನ್ನಡ| ಡೆಂಗ್ಯೂಗೆ ಪುತ್ತೂರಿನ ಗೃಹಿಣಿ ಬಲಿ!

ಪುತ್ತೂರು: ಅರಿಯಡ್ಕ ಗ್ರಾಮ ನಿವಾಸಿ ಗೃಹಿಣಿ ನಸೀಮಾ (32)  ಡೆಂಗ್ಯೂ ಜ್ವರದಿಂದ ಜೂ. 18ರಂದು ತಡರಾತ್ರಿ ಮಂಗಳೂರಿನ ಖಾಸಗಿ ಅಸ್ಪತ್ರೆಯೊಂದರಲ್ಲಿ ಮೃತ ಪಟ್ಟಿರುತ್ತಾರೆ. ಇವರು ವಾರದ ಹಿಂದೆ ಜ್ವರಭಾದೆಯಿಂದ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ ಉಲ್ಭಣಿಸಿದ ಹಿನ್ನೆಲೆಯಲ್ಲಿ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಇವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಮೃತರು ಪತಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ವರದಿ ಬಂದಿಲ್ಲ
ಅರಿಯಡ್ಕದ ಗೃಹಿಣಿ ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಕುರಿತು ವೈದ್ಯಕೀಯ ವರದಿ ಇನ್ನೂ ಬಂದಿಲ್ಲ. ಈಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪುತ್ತೂರಿನಲ್ಲಿ ಇಲ್ಲಿಯವರೆಗೆ ಡೆಂಗ್ಯೂ ಜ್ವರಕ್ಕೆ ಒಬ್ಬರು ಬಲಿಯಾಗಿದ್ದಾರೆ. ಜೂನ್ ೧೮ರಂದು ತಡರಾತ್ರಿ ಮೃತಪಟ್ಟಿರುವ ಮಹಿಳೆಯ ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಇವರ ಸಾವಿನ ಕಾರಣ ಗೊತ್ತಾಗಲಿದೆ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss