ಹೊಸದಿಗಂತ ಆನ್ಲೈನ್ ಡೆಸ್ಕ್:
ದಕ್ಷಿಣ ಕೊರಿಯಾದಲ್ಲಿ ಮೂರು ಸೂಪರ್ ಸ್ಪೀಡ್ ಕೊರೋನಾ ಪ್ರಕರಣಗಳು ದೃಢಪಟ್ಟಿವೆ.
ಹೊಸ ಸ್ವರೂಪದದ ಕೊರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದಾಗಿ ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ ತಿಳಿಸಿದೆ.
ಯುನೈಟೆಡ್ ಕಿಂಗ್ಡಮ್ನಿಂದ ಆಗಮಿಸಿದ ಮೂವರಲ್ಲಿ ಸೋಂಕು ಕಾಣಿಸಿದೆ. ಪರೀಕ್ಷೆಯಲ್ಲಿ ಸೂಪರ್ ಸ್ಪೀಡ್ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಅವರನ್ನು ಜನರ ಸಂಪರ್ಕದಿಂದ ದೂರ ಇಡಲಾಗಿದೆ.