Sunday, August 14, 2022

Latest Posts

ದಕ ಜಿಲ್ಲೆಯಲ್ಲಿ ಮಂಗಳವಾರ 211 ಮಂದಿಗೆ ಕೊರೋನಾ ಪಾಸಿಟಿವ್ , 209 ಮಂದಿ ಗುಣಮುಖ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ೨೧೧ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ೨೦೯ ಮಂದಿ ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಸೋಂಕಿತರ ಪೈಕಿ ೧೧೧ ಮಂದಿ ಮಂಗಳೂರು ತಾಲೂಕು ನಿವಾಸಿಗಳು. ಬಂಟ್ವಾಳದ ೪೩, ಪುತ್ತೂರಿನ ೧೭, ಸುಳ್ಯದ ಒಬ್ಬರು, ಬೆಳ್ತಂಗಡಿಯ ೧೯ ಮಂದಿ ಹಾಗೂ ಹೊರಜಿಲ್ಲೆಯ ೨೦ ಜನರಿಗೆ ಸೋಂಕು ತಗುಲಿದೆ. ೬೧ ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಕೊರೋನಾ ಹರಡಿದೆ. ಶೀತಜ್ವರದ ಲಕ್ಷಣದೊಂದಿಗೆ ೯೪ ಮಂದಿಗೆ, ಉಸಿರಾಟ ಸಮಸ್ಯೆಯ ೧೨ ಮಂದಿಗೆ ಕೋವಿಡ್ ಬಾಧಿಸಿದೆ. ೪೪ ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.
ಗುಣಮುಖಗೊಂಡವರ ಪೈಕಿ ೧೭೦ ಮಂದಿ ಮನೆಯಲ್ಲಿ, ೩೯ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತಪಟ್ಟವರಲ್ಲಿ ಇಬ್ಬರು ಮಂಗಳೂರು ತಾಲೂಕಿನವರು. ಒಬ್ಬರು ಬಂಟ್ವಾಳ, ಮೊತ್ತೊಬ್ಬರು ಹೊರಜಿಲ್ಲೆಯವರು.
ಜಿಲ್ಲೆಯಲ್ಲಿ ಈಗ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ೨೦೫೭೮ಕ್ಕೆ ಏರಿಕೆಯಾಗಿದೆ. ಈ ಪೈಕಿ ೪೩೬೯ ಸಕ್ರಿಯ ಪ್ರಕರಣಗಳು. ೧೫೭೧೪ ಮಂದಿ ಗುಣಮುಖರಾಗಿದ್ದಾರೆ. ೪೯೪ ಮಂದಿ ಮೃತಪಟ್ಟಿದ್ದಾರೆ ಎಂದು ದ.ಕ. ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss