Monday, July 4, 2022

Latest Posts

ದನಕರುಗಳಿಗೆ ಹುಲ್ಲು ತರಲು ಹೋದ ಯುವಕನಿಗೆ ಹಾವು ಕಚ್ಚಿ ಸಾವು

ಹೊಸ ದಿಗಂತ ವರದಿ, ಕೆ.ಆರ್.ಪೇಟೆ :

ಹಾವು ಕಡಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೂವನಹಳ್ಲಿ ಗ್ರಾಮದಲ್ಲಿ ನಡೆದಿದೆ.
ಅಜಯ್ (23) ಮೃತ ರೈತ ಜಮೀನಿನಲ್ಲಿ ದನಕರುಗಳಿಗೆ ಹುಲ್ಲು ತರಲು ಹೋಗಿದ್ದಾಗ ಜಮೀನಿನಲ್ಲಿ ಹಾವು ಕಡಿದಿದ್ದು ನಂತರ ವಿಷಯ ತಿಳಿದು ಅವನನ್ನು ಪಟ್ಟಣದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಮೃತನಾಗಿದ್ದು ಮೃತ ಶರೀರದ ಮರಣೋತ್ತರ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದು ಗ್ರಾಮಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಹಾವು ಕಡಿತದಿಂದ ಮೃತಪಟ್ಟ ವ್ಯಕ್ತಿಗೆ ಸರ್ಕಾರ ಕೃಷಿ ಮತ್ತು ಎಪಿಎಂಸಿ ಇಲಾಖೆಗಳ ಮೂಲಕ ಪರಿಹಾರ ನೀಡಬೆಕೆಂದು ವಕೀಲ ನಾಗೇಶ್, ಬಳ್ಳೇಕೆರೆ ಗ್ರಾ.ಪಂ. ಮಾಜಿ ಅದ್ಯಕ್ಷ ಚೌಡೇನಹಳ್ಳಿ ನಾಗರಾಜು, ಬೂವನಹಳ್ಳಿ ರೇವಣ್ಣ, ಸೇರಿದಂತೆ ರೈತ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss