ಹೊಸ ದಿಗಂತ ವರದಿ ರಾಮನಗರ:
ಸಾಯುವ ಮುನ್ನ ವ್ಯಕ್ತಿಯೊಬ್ಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದು ತನ್ನ ಅಂತ್ಯಸಂಸ್ಕಾರಕ್ಕೆ ಬರುವಂತೆ ಮನವಿ ಮಾಡಿಕೊಂಡಿರುವ ಮನ ಮಿಡಿಯುವ ಸಂಗತಿ ರಾಮನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಕಾಲಿನ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದ ಜಿಲ್ಲೆಯ ಗಾಂಧಿನಗರದ ನಿವಾಸಿ ಆರ್.ಜಯರಾಂ ಮಾಜಿ ಮುಖ್ಯಮಂತ್ರಿಗಳ ಕಟ್ಟಾ ಅಭಿಮಾನಿ.ಹೀಗಾಗಿ, ತನ್ನ ಆರೋಗ್ಯ ಹದಗೆಟ್ಟು ಬದುಕಿನ ಅಂತಿಮ ಘಟ್ಟ ತಲುಪಿದ ಜಯರಾಂ ಕುಮಾರಸ್ವಾಮಿಗೆ ತನ್ನ ಶವಸಂಸ್ಕಾರಕ್ಕೆ ಬರುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಜೊತೆಗೆ, ತಮ್ಮ ಬುದ್ಧಿಮಾಂದ್ಯ ಮಗನಿಗೆ ಆರ್ಥಿಕ ನೆರವು ನೀಡುವಂತೆ ಸಹ ತಮ್ಮ ಪತ್ರದಲ್ಲಿ ಕೇಳಿಕೊಂಡಿದ್ದಾರೆ. ಪತ್ರ ಬರೆದ ನಂತರ ಜಯರಾಂ ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.