Saturday, January 23, 2021

Latest Posts

ದರ್ಶನ್ ಅಭಿಮಾನಿಗಳು ಕಾಯುತ್ತಿದ್ದ ದಿನ ಬಂದೇಬಿಡ್ತು! ಯಾಕೆ ಅಂತೀರಾ?ಇಲ್ಲಿದೆ ಮಾಹಿತಿ

ಬೆಂಗಳೂರು: ನಟ ದರ್ಶನ್  ಅಭಿನಯದ ರಾಬರ್ಟ್ ಚಿತ್ರಕ್ಕಾಗಿ  ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಷ್ಟೊತ್ತಿಗಾಗಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು.ಆದರೆ ಕೊರೋನಾ ವೈರೆಸ್ ನಿಂದಾಗಿ  ಸಿನಿಮಾ ಮುಂದೂಡಿದೆ .  ಸದ್ಯ ಈ ಚಿತ್ರದ  ಟೀಸರ್  ನೋಡಿದ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಅಭಿಮಾನಿಗಳಿಗೆ ರಾಬರ್ಟ್ ಚಿತ್ರತಂಡದಿಂದ ಸಿಹಿ ಸುದ್ದಿ ಸಿಕ್ಕಿದೆ.ದರ್ಶನ್ ನಟನೆಯ ರಾಬರ್ಟ್, ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ, ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾಗಳು ಬಿಡುಗಡೆಗಾಗಿ ಸಾಲಿನಲ್ಲಿದೆ. ಈ ಚಿತ್ರಗಳ ಪೈಕಿ ಯಾವುದು ಮೊದಲು ಪ್ರೇಕ್ಷಕರ ಮುಂದೆ ಬರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ಕುತೂಹಲದ ನಡುವೆ ರಾಬರ್ಟ್ ಸಿನಿಮಾ ಕ್ರಿಸ್ಮಸ್ಗೆ ಬರಲಿದೆ ಎಂಬ ಸುದ್ದಿ ಹೊರಗೆ ಬಿದ್ದಿದೆ.

ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರು ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಒಂದು ಪಾತ್ರ ರಾಬರ್ಟ್. ಕಳೆದ ವರ್ಷದ ಕ್ರಿಸ್‌ಮಸ್‌ ಪ್ರಯುಕ್ತ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ರಾಬರ್ಟ್ ಸಿನಿಮಾ ಬಿಡುಗಡೆಗೆ ಇದಕ್ಕಿಂತ ಉತ್ತಮ ದಿನ ಸದ್ಯಕ್ಕೆ ಇಲ್ಲ ಎಂದು ನಿರ್ಧರಿಸಿದಂತಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!