Sunday, June 26, 2022

Latest Posts

ದಲಿತ ಯುವತಿಗೆ ಆಂಧ್ರದಲ್ಲಿ ವಂಚನೆ: ಎಸ್‌ಡಿಪಿಐ ಮುಖಂಡನ ಪುತ್ರನ ಬಂಧನ

ಪುತ್ತೂರು: ಆಂಧ್ರಪ್ರದೇಶದ ಹೈದರಾಬಾದ್ ನಗರದ ರಾಚಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ದಲಿತ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಪುತ್ತೂರಿನ ಸಾಲ್ಮರ ನಿವಾಸಿ ಎಸ್‌ಡಿಪಿಐ ಮುಖಂಡ ಹಮೀದ್ ಸಾಲ್ಮರನ ಪುತ್ರ ಮೊಹಮ್ಮದ್ ಫೈಝಲ್ (24)ನನ್ನು ಭಾನುವಾರ ರಾತ್ರಿ ಮನೆಗೆ ದಾಳಿ ನಡೆಸಿ ಬಂಧಿಸಿ ಕರೆದೊಯ್ದ ಘಟನೆ ನಡೆದಿದೆ.
ಘಟನೆಯ ವಿವರ
ದಲಿತ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಬೆಳೆಸಿ ಆಕೆಯೊಂದಿಗೆ ಸ್ನೇಹ ಸಂಪಾದಿಸಿ ಬಳಿಕ ಆರೋಪಿಯು ಪ್ರೀತಿಯ ನಾಟಕವಾಡಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿದ್ದನು. ಮದುವೆಯನ್ನು ನಿರಾಕರಿಸಿದ ಆರೋಪಿ ಫೈಝಲ್ ಆಕೆಯ ಭಾವಚಿತ್ರಗಳನ್ನು ಅಶ್ಲೀಲ ಚಿತ್ರಗಳನ್ನಾಗಿ ಪರಿವರ್ತಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಸಿ ರಾತ್ರೋರಾತ್ರಿ ಪುತ್ತೂರಿನ ಮನೆಗೆ ಬಂದು ಅವಿತುಕೊಂಡಿದ್ದನು.
ದಲಿತ ದೌರ್ಜನ್ಯ ಪ್ರಕರಣ
ಆರೋಪಿಯ ವಿರುದ್ಧ ದಲಿತ ಯುವತಿಯು ರಾಚಕೊಂಡ ಪೊಲೀಸರಿಗೆ ದೂರು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆರೋಪಿಯ ವಿಳಾಸವನ್ನು ಪತ್ತೆ ಹಚ್ಚಿದ ಹೈದರಾಬಾದ್ ಪೊಲೀಸರುರ ಆರೋಪಿಯ ಜಾಡು ಹಿಡಿದು ಪುತ್ತೂರಿಗೆ ಬಂದಿದ್ದರು. ಪುತ್ತೂರು ನಗರ ಪೊಲೀಸರ ಸಹಕಾರದೊಂದಿಗೆ ಆರೋಪಿಯ ಮನೆಗೆ ದಾಳಿ ನಡೆಸಿ ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ಸ್ಥಳೀಯ ಪೊಲೀಸರಿಗೂ ಲಭ್ಯವಿಲ್ಲ.

ಇದು ವಿಪರ್ಯಾಸ
ಭಾನುವಾರ ಹೈದರಾಬಾದ್ ಪೊಲೀಸರು ಮೊಹಮ್ಮದ್ ಫೈಝಲ್‌ನನ್ನು ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ಕರೆದೊಯ್ದಿದ್ದರೂ ಆರೋಪಿಯ ತಂದೆ ಅಬ್ದುಲ್ ಹಮೀದ್ ಸಾಲ್ಮರ ಸೋಮವಾರ ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಮತ್ತು ದಲಿತ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ವಿಪರ್ಯಾಸಕರ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss