ದಾಂಡೇಲಿ| ಕೊರೋನಾ ಪೀಡಿತನ ಅಜ್ಜಿ ಆತ್ಮಹತ್ಯೆ

0
165

ದಾಂಡೇಲಿ: ಕೊರೋನಾ ಸೋಂಕು ತಮಗೂ ಬಂದಿರಬಹುದೆಂಬ ಭೀತಿಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಕೊರೋನಾ ಪೀಡಿತನ ಅಜ್ಜಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಹಳೆದಾಂಡೇಲಿಯ ೨೪ ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಕುಟುಂಬದ ಅಜ್ಜಿ, ತಾಯಿ ಸೇರಿ ನಾಲ್ವರನ್ನು ಸರ್ಕಾರಿ ಆಸ್ಪತ್ರೆಯ ಐಸೊಲೆಟೆಡ್ ವಾರ್ಡಿನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಜೊತೆಗೆ ಇವರೆಲ್ಲರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಇನ್ನಷ್ಟೇ ವರದಿ ಬರಬೇಕಿದೆ. ಆದರೆ ಶುಕ್ರವಾರ ಬೆಳಿಗ್ಗೆ ತಮಗೂ ಕೊರೋನಾ ಬಂದಿರಬಹುದೆನ್ನುವ ಭಯದಿಂದ ಸೋಂಕಿತನ ೬೨ ರ ಪ್ರಾಯದ ಅಜ್ಜಿ ಆಸ್ಪತ್ರೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಮ್ಮಗನಿಗೆ ಸೊಂಕು ತಗುಲಿರುವದರಿಂದ ತಮಗೂ ಬಂದಿರಬಹುದೆಂದು ಅಜ್ಜಿ ಸಾಕಷ್ಟು ನೊಂದುಕೊಂಡಿದ್ದರು ಎಂದು ತಿಳಿದು ಬಂದಿದೆ. ಜಿಲ್ಲಾ ಸಹಾಯಕ ಕಮಿಷನರ್ ಪ್ರಿಯಾಂಗಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಹಶೀಲ್ದಾರ ಶೈಲೇಶ ಪರಮಾನಂದ, ನಗರಸಭೆ ಪೌರಾಯುಕ್ತ ಡಾ. ಸೈಯದ್ ಜಾಹೇದ್ ಅಲಿ, ತಾಲೂಕಾ ವೈದ್ಯಾಧಿಕಾರಿ ಡಾ. ರಮೇಶ ಕದಂ, ಆಸ್ಪತ್ರೆಯ ವೈದ್ಯಾಧಿಕಾರಿ ರಾಜೇಶ ಪ್ರಸಾದ, ಡಿ.ವೈ.ಎಸ್. ಪಿ ಮೋಹನ ಪ್ರಸಾದ. ಸಿ.ಪಿ.ಐ ಪ್ರಭು ಗಂಗನಹಳ್ಳಿ, ಅಪರಾಧ ವಿಭಾಗದ ಪಿ.ಎಸೈ ಮಂಜುಳಾ ನಾಯಕೊಡಿ ಇದ್ದರು.

LEAVE A REPLY

Please enter your comment!
Please enter your name here