Wednesday, August 10, 2022

Latest Posts

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲ ರಾತ್ರಿಯೇ ನವವಧು ದುರ್ಮರಣ

ಹೊಸ ದಿಗಂತ ವರದಿ,ಮಂಗಳೂರು:

ಸುಂದರ ಬದುಕಿನ ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ 24 ಗಂಟೆಗಳ ಅಂತರದಲ್ಲಿಯೇ ನವವಧು ದುರ್ಮರಣಕ್ಕೀಡಾದ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.
ನಗರದ ಹೊರವಲಯದ ಅಡ್ಯಾರ್ ಸಮೀಪದ ಕಣ್ಣೂರಿನಲ್ಲಿ ಈ ಘಟನೆ ಸಂಭವಿಸಿದೆ. ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ.ಎಚ್.ಕೆ. ಅಬ್ದುಲ್ ಕರೀಂ ಹಾಜಿ ಅವರ ಪುತ್ರಿ ಲೈಲಾ ಆಫಿಯಾ (23) ಮೃತಪಟ್ಟ ನವವಧು. ಇವರು ಹೃದಯಾಘಾತದಿಂದ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಭಾನುವಾರಷ್ಟೆ ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ಲೈಲಾ ನಿಖಾಹ್ ಅಲ್ಲಿನ ಜುಮಾ ಮಸೀದಿಯಲ್ಲಿ ನೆರವೇರಿತ್ತು. ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಬಳಿಕ ರಾತ್ರಿ ಸಂಪ್ರದಾಯದಂತೆ ನವ ವಧೂ-ವರರು ವಧುವಿನ ಮನೆಗೆ ತೆರಳಿದ್ದರು. ಆದರೆ ಮೊದಲ ರಾತ್ರಿ ಕಳೆದು ಸೋಮವಾರ ಮುಂಜಾನೆ 3 ಗಂಟೆ ವೇಳೆಗೆ ಲೈಲಾ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ನವವಧುವಿನ ಅಕಾಲಿಕ ನಿಧನದಿಂದ ಇಡೀ ಕುಟುಂಬ ಶೋಕತಪ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss