ಬೆಂಗಳೂರು: ರೈಲು ಸೇವೆ ಜೂನ್ 1ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಚುರುಕುಗೊಂಡಿದ್ದು ಎರಡೇ ಗಂಟೆಯಲ್ಲಿ 1.5 ಲಕ್ಷ ಟಿಕೆಟ್ ಬುಕ್ಕಿಂಗ್ ದಾಖಲಾಗಿದೆ!
ಬೆಳಿಗ್ಗೆ 10 ಗಂಟೆಗೆ ಬುಕಿಂಗ್ ಪ್ರಾರಂಭವಾಗಿದ್ದು ಮಧ್ಯಾಹ 12 ಗಂಟೆಯ ಒಳಗೆ 1,49,025 ಟಿಕೆಟ್ಗಳನ್ನು ಬುಕ್ಕಿಂಗ್ ದಾಖಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಲಾಕ್ ಡೌನ್ ನಿಂದ ಸ್ಥಗಿತಗೊಳಿಸಲಾಗಿದ್ದ ರೈಲು ರೈಲು ಸೇವೆ ಈಗ ಜೂನ್ 1ರಿಂದ ಆರಂಭಿಸಲಾಗುತ್ತಿದ್ದು, ಶ್ರಮಿಕ ರೈಲುಗಳ ಹೊರತಾಗಿ ಹೆಚ್ಚುವರಿ ಜೂ.1 ರಿಂದ 200 ರೈಲುಗಳ ಓಡಲಿವೆ. ಈ ರೈಲುಗಳಲ್ಲಿ ಮುಂಬಯಿ ಸಿಎಸ್ಟಿಯಿಂದ ಗದಗ, ಮುಂಬಯಿ ಸಿಎಸ್ಟಿಯಿಂದ ಕೆಎಸ್ಆರ್ ಬೆಂಗಳೂರು, ದಾಣಾಪುರದಿಂದ ಕೆಎಸ್ಆರ್ ಬೆಂಗಳೂರು, ಹೌರಾದಿಂದ ಯಶವಂತಪುರ ವರಗೆ ದುರಂತೊ, ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಯಶವಂತಪುರದಿಂದ ಶಿವಮೊಗ್ಗ ಗಮ್ಯಸ್ಥಾನಗಳಿಗೆ ಜನಶತಾಬ್ದಿ ರೈಲು ಸೇವೆಗಳು ಸೇರಿವೆ.