Monday, July 4, 2022

Latest Posts

ದಾಖಲೆ ಬರೆದ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ: ಅಕ್ಟೋಬರ್ ತಿಂಗಳಿನಲ್ಲಿ ಬರೋಬ್ಬರಿ 800 ಹೆರಿಗೆ!

ಮಂಗಳೂರು: ಇಲ್ಲಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಅಪರೂಪದ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.
ಈ ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಬರೋಬ್ಬರಿ 800 ಹೆರಿಗೆಗಳಾಗಿವೆ. ಶತಮಾನದ ಇತಿಹಾಸವಿರುವ ಈ ಆಸ್ಪತ್ರೆಯಲ್ಲಿ ಇಷ್ಟು ಹೆರಿಗೆ ಒಂದೇ ತಿಂಗಳಿನಲ್ಲಿ ಇದುವರೆಗೆ ಆಗಿರಲಿಲ್ಲ. ಅ.30ರವರೆಗೆ ಒಟ್ಟು ಹೆರಿಗೆ 780 ದಾಟಿತ್ತು. ಅ.31ರಂದು ಸಂಜೆ ವೇಳೆಗೆ ಈ ಸಂಖ್ಯೆ 800ಕ್ಕೆ ಏರಿಕೆಯಾಗಿದೆ.
ಲೇಡಿಗೋಷನ್ ಆಸ್ಪತ್ರೆಗೆ ಕಳೆದ ವರ್ಷ ಎಂಆರ್‌ಪಿಎಸ್ ನೆರವಿನಲ್ಲಿ ಸುಸಜ್ಜಿತ ಕಟ್ಟಡ ಲಭಿಸಿದೆ. ಅಲ್ಲದೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಉಪಕರಣಗಳೂ ಬಂದಿವೆ. ಈ ಹೊಸ ಕಟ್ಟಡದ ಆಸ್ಪತ್ರೆಯಲ್ಲಿ 272 ಬೆಡ್‌ಗಳಿದ್ದು,  ಕಳೆದ ಕೆಲವು ತಿಂಗಳಿನಿಂದ ಇಲ್ಲಿ ಎಲ್ಲಾ ಬೆಡ್‌ಗಳೂ ಭರ್ತಿಯಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss