Tuesday, July 5, 2022

Latest Posts

ದಾರಿಗಡ್ಡ ನಿಂತು ಸ್ಟ್ರೈಕ್ ಮಾಡ್ತಿದ್ದ ಭಾರೀ ಗಾತ್ರದ ಆಮೆ ಕುಕ್ಕರಹಳ್ಳಿ ಕೆರೆಗೆ ವಾಪಸ್!

ಹೊಸದಿಗಂತ ವರದಿ,ಮೈಸೂರು:

ರಸ್ತೆ ಮಧ್ಯೆ ಬಂದು ನಿಂತಿದ್ಧ ಬೃಹತ್ ಗಾತ್ರದ ಆಮೆಯನ್ನ ಅಲ್ಲಿದ್ಧ ವಾಯುವಿಹಾರಿಗಳು ರಕ್ಷಿಸಿ ಮತ್ತೆ ಕೆರೆಗೆ ಬಿಟ್ಟಿರುವ ಘಟನೆ ಅರಮನೆ ನಗರಿ ಮೈಸೂರಿನಲ್ಲಿ ಬುಧವಾರ ನಡೆದಿದೆ.

ಮೈಸೂರಿನ ಕುಕ್ಕರಹಳ್ಳಿ ಕೆರೆಯ ಕುಕ್ಕರಹಳ್ಳಿ ಕೆರೆಯಿಂದ ಬೃಹತ್ ಗಾತ್ರದ ಆಮೆ ಬಂದು ರಸ್ತೆ ಮಧ್ಯೆದಲ್ಲಿ ಪ್ರತ್ಯೆಕ್ಷವಾಗಿದ್ದು, ಕತ್ತಲಿನಲ್ಲಿ ಆಮೆ ಕಂಡು ವಾಯುವಿಹಾರಿಗಳು ಸ್ವಲ್ಪಕಾಲ ಗಾಬರಿಗೊಂಡರು. ನಂತರ ಅದು ಆಮೆ ಎಂದು ಖಚಿತವಾದ ಬಳಿಕ ಅದನ್ನು ರಕ್ಷಣೆ ಮಾಡಿ, ಮತ್ತೆ ಅದನ್ನು ಕೆರೆಯ ನೀರಿಗೆ ಬಿಟ್ಟರು. ಕುಕ್ಕರಹಳ್ಳಿ ಕೆರೆ ಬೃಹತ್ ಗಾತ್ರದ ಆಮೆಗಳ ಅವಾಸ ಸ್ಥಾನವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss