Wednesday, June 29, 2022

Latest Posts

ದಾರಿ ಮಧ್ಯೆ ಅಡ್ಡಗಟ್ಟಿ ದರೋಡೆ: ಇಬ್ಬರು ದರೋಡೆಕೋರರ ಬಂಧನ

ಹೊಸ ದಿಗಂತ ವರದಿ ಮೈಸೂರು:

ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಇಬ್ಬರು ದರೋಡೆಕೋರರನ್ನ ಮೈಸೂರಿನ ಸರಸ್ವತಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸರಸ್ವತಿಪುರಂ ನಿವಾಸಿ ಭರತ್(24), ಕುವೆಂಪುನಗರ ನಿವಾಸಿ ಚಂದು(21) ಬಂಧಿತ ಆರೋಪಿಗಳು. ಇವರಿಂದ 8 ಸಾವಿರ ಮೌಲ್ಯದ ಮೊಬೈಲ್ ಫೋನ್, ನಗದು ಹಣ ಹಾಗೂ ಎರಡು ದ್ವಿಚಕ್ರವಾಹನವನ್ನ ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 1 ರಂದು ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ರಾತ್ರಿ ಫೈರ್ ಬ್ರಿಗೇಡ್ ವೃತ್ತದ ಬಳಿ ಬರುತ್ತಿದ್ದ ವೇಳೆ ಅವರನ್ನ ಹಿರೋ ಹೋಂಡಾ ಸ್ಪೆಂಡರ್ ಬೈಕ್‌ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿ, ಮೊಬೈಲ್ ಫೋನ್ ಮತ್ತು ಪರ್ಸ್ ಕಿತ್ತು ಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಸರಸ್ವತಿಪುರಂ ಪೋಲೀಸರು, ಖಚಿತ ಮಾಹಿತಿ ಮೇರೆಗೆ ಸರಸ್ವತಿಪುರಂ ದೊಡ್ಡ ಮೋರಿ ರಸ್ತೆ ಬಳಿ ಮೊಬೈಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಈ ಭರತ್, ಚಂದು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss