ದಾಳಿಂಬೆ ಹಣ್ಣು ಎಷ್ಟು ಸಿಹಿಯಾಗಿರುತ್ತದೆಯೋ, ಅದರ ಸಿಪ್ಪೆ ಅಷ್ಟೇ ಕಹಿಯಾಗಿರುತ್ತದೆ. ನಾವು ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಸಿಪ್ಪೆಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಅನೇಕ ಅಂಶಗಳು ಅಡಗಿವೆ. ನಾನಾ ರೋಗಗಳಿಗೆ ದಾಳಿಂಬೆ ಸಿಪ್ಪೆ ಔಷಧಿ. ಏನೆಲ್ಲಾ ಆರೋಗ್ಯ ಸಮಸ್ಯೆಗೆ ದಾಳಿಂಬೆ ಸಿಪ್ಪೆ ಬರುತ್ತದೆ ಇಲ್ಲಿದೆ ನೋಡಿ..
ಭೇದಿ:
ಅತಿಯಾಗಿ ಬೇಧಿಯಾಗುತ್ತಿದ್ದರೆ ದಾಳಿಂಬೆ ಸಿಪ್ಪೆಯನ್ನು ತೇಯ್ದು ಅದರ ಒಂದು ಚಮಚ ರಸವನ್ನು ಲಿಂಬೆ ರಸದೊಂದಿಗೆ ಸೇವಿಸಿದರೆ ತಕ್ಷಣ ಭೇದಿ ನಿಲ್ಲುತ್ತದೆ.
ಮೂತ್ರ:
ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದರೆ ದಿನವೂ ರಾತ್ರಿ ದಾಳಿಂಬೆ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದನ್ನು ಅರ್ಧ ಕಪ್ ನೀರಿಗೆ ಹಾಕಿ ಕುಡಿಸುವುದರಿಂದ ಹಾಸಿಗೆಯಲ್ಲಿ ಮೂತ್ರ ಮಾಡುವುದು ನಿಲ್ಲುತ್ತದೆ.
ಕುರ:
ಕುರ ಆದಾಗ ದಾಳಿಂಬೆ ಸಿಪ್ಪೆಯನ್ನು ತೇಯ್ದು ಅದರ ರಸವನ್ನು ಕುರದ ಮೇಲೆ ಹಚ್ಚುವುದರಿಂದ ಕುರ ಕಡಿಮೆ ಆಗುತ್ತದೆ.
ಬಾಯಿ ದುರ್ವಾಸನೆ:
ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ದಾಳಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿಕೊಂಡು ಪುಡಿ ಮಾಡಿಕೊಳ್ಳಬೇಕು. ನಂತರ ಅದನ್ನು ನೀರಿಗೆ ಹಾಕಿ ಮಿಶ್ರಣ ಮಾಡಿಕೊಂಡು ಬಾಯಿ ಮುಕ್ಕಳಿಸಬೇಕು.
ತುಟಿ:
ದಾಳಿಂಬೆ ಸಿಪ್ಪೆಯನ್ನು ತೇಯ್ದು ಅದರ ರಸವನ್ನು ತುಟಿಗಳಿಗೆ ಹಚ್ಚಿಕೊಳ್ಳುವುದರಿಂದ ತುಟಿಗಳು ಕೆಂಪಾಗುತ್ತದೆ.
ಹೃದಯ:
ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿರುವ ಪ್ರಮುಖ ಆರೋಗ್ಯ ಲಾಭವೆಂದರೆ ಇದು ಹೃದಯದ ಕಾಯಿಲೆ ವಿರುದ್ಧ ಹೋರಾಡುತ್ತದೆ. ದಾಳಿಂಬೆ ಸಿಪ್ಪೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್, ಫ್ರೀ ರ್ಯಾಡಿಕಲ್ ನ್ನುಕಿತ್ತು ಹಾಕಿ ಹೃದಯವನ್ನು ರಕ್ಷಿಸುವುದು.